ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವೂರ ಶಾಲೆ ಪರಿಸರ ಕಾಳಜಿಗೆ ಮಾದರಿ

Last Updated 10 ಜೂನ್ 2018, 10:05 IST
ಅಕ್ಷರ ಗಾತ್ರ

ವಾಡಿ: ಪಟ್ಟಣ ಸಮೀಪದ ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠ  ನಡೆಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಯು ತನ್ನ ಪರಿಸರ ಕಾಳಜಿಯಿಂದ ಗಮನ ಸೆಳೆಯುತ್ತಿದೆ. ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಠದ ಶ್ರೀಗಳು, ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರಿಶ್ರಮದಿಂದ ಶಾಲೆಯ ಆವರಣದ ಸುಮಾರು 2ಎಕರೆ ವಿಸ್ತೀರ್ಣದಲ್ಲಿ ವಿವಿಧ ಬಗೆಯ ಹೂಗಿಡಗಳಿಂದ ಕಂಗೊಳಿಸುತ್ತಿರುವ ಉದ್ಯಾನವನವು ಮಕ್ಕಳ ಮನಸ್ಸಿಗೆ ಮುದ ನೀಡುತ್ತಿದೆ.

ಶಾಲೆಯ ಆವರಣದ ಹಸಿರು ಪರಿಸರವು ನೋಡುಗರನ್ನು ಹಿಡಿದಿ ಡುತ್ತದೆ. ಉದ್ಯಾನದ ಅಂದವನ್ನು ಆಹ್ಲಾದಿಸಿ ಕೊಣೆಯ ಒಳಗಡೆ ಹೋಗುವ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡುತ್ತದೆ. ಸಿದ್ದಲಿಂಗೇಶ್ವರ ಸಂಸ್ಥೆಯ ಪೀಠಾಧಿಪತಿ ಸಿದ್ದಲಿಂಗ ಶ್ರೀಗಳು ಹಾಗೂ ಅಧ್ಯಕ್ಷ ಡಾ. ಗುಂಡಣ್ಣಾ ಬಾಳಿ ಅವರ ಪರಿಸರ ಕಾಳಜಿಗೆ ಈ ಉದ್ಯಾನ ಸಾಕ್ಷಿ ಎನ್ನುವಂತಿದೆ.

ಈ ಕುರಿತು ಮಾತನಾಡಿದ ಸಂಸ್ಥೆಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳು, 'ಶಾಲೆಯನ್ನು ದೇವಸ್ಥಾನಗಳಿಗೆ ಹೋಲಿಸುತ್ತೇವೆ, ಆದರೆ ಸ್ವಚ್ಛತೆಗೆ ಮುಂದಾಗುವುದಿಲ್ಲ. ಪರಿಸರದಿಂದ ದೊರಕುವ ಲಾಭಗಳನ್ನು ಇಂದಿನ ಪೀಳಿಗೆಗ ಪ್ರಾತ್ಯಕ್ಷಿಕೆ ಮೂಲಕ ತಿಳಿ ಹೇಳಬೇಕಾಗಿದೆ. ನಮ್ಮ ಜನರಿಗೆ ಗಿಡಗಳನ್ನು ಕಡಿಯುವುದು ಗೊತ್ತು. ಆದರೆ ಬೆಳೆಸುವುದು ಗೊತ್ತಿಲ್ಲ. ಶುದ್ಧವಾದ ಆಮ್ಲಜನಕ ನೀಡುವ ಗಿಡ ಮರಗಳನ್ನು ಬೆಳೆಸುವುದು, ಪೋಷಿ ಸುವುದು ಹಾಗೂ ಸಂರಕ್ಷಿಸುವುದು ನಮ್ಮ ಜೀವನದ ಉಸಿರಾಗಬೇಕು ಎಂದರು.

ಶಾಲೆಯ ಆವರಣದಲ್ಲಿ ಬೆಳೆದಿರುವ 40 ಅಶೋಕ ಗಿಡಗಳು, 20 ಬೇವಿನ ಗಿಡಗಳು ಸೇರಿದಂತೆ ವಿವಿಧ ಬಗೆಯ ಹೂ ಗಿಡಗಳು ತಂಪು ನೀಡುತ್ತಿವೆ.

ಶಾಲೆಯ ಪಕ್ಕದಲ್ಲಿ ಮಕ್ಕಳು ಕಾಳಜಿ ಯಿಂದ ಬೆಳೆದಿರುವ ತರಕಾರಿಗಳಿಂದ ಬಿಸಿಯೂಟ ತಯಾರಿ ಸುವುದು ಇಲ್ಲಿನ ವಿಶೇಷವಾಗಿದೆ. ಕೈತೋಟದಲ್ಲಿ ಬದನೆ, ಪಾಲಕ್, ಟೊಮ್ಯಾಟೊ, ಮುಲ್ಲಂಗಿ, ರಾಜಗಿರಿ ಹಾಗೂ ಮೆಣಸಿನಕಾಯಿಯಂತಹ ತರಕಾರಿಗಳನ್ನು ಬೆಳೆಯಲಾಗಿದೆ.

ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ಮಕ್ಕಳನ್ನೊಳಗೊಂಡ ಇಕೋ ಕ್ಲಬ್ ತಂಡ ರಚಿಸಲಾಗಿದೆ. ಮಕ್ಕಳಲ್ಲಿ ಗಿಡ ನೆಡುವ ಹಾಗೂ ಪರಿಸರ ಬೆಳೆಸುವಲ್ಲಿ ಸಹಕಾರಿಯಾಗುತ್ತದೆ
ಸಿದ್ದಲಿಂಗ ಬಾಳಿ, ಶಿಕ್ಷಕರು, ಸಚ್ಚಿದಾನಂದ ಫ್ರೌಢಶಾಲೆ ರಾವೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT