ಮಳೆಗೆ ಉಕ್ಕಿ ಹರಿದ ಚರಂಡಿ ನೀರು

7
ವಾಹನ ಸವಾರರು ಪರದಾಟ, ಚರಂಡಿ ಸ್ವಚ್ಛಗೊಳಿಸಲು ಆಗ್ರಹ

ಮಳೆಗೆ ಉಕ್ಕಿ ಹರಿದ ಚರಂಡಿ ನೀರು

Published:
Updated:

ಶಹಾಪುರ: ನಗರದಲ್ಲಿ ಶನಿವಾರ ಸಂಜೆ ಸುರಿದ ಮಳೆಗೆ ಚರಂಡಿಯ ನೀರು ಉಕ್ಕಿ ಹರಿದವು. ಮನೆ ಸೇರುವ ಧಾವಂತದಲ್ಲಿದ್ದ ಮಹಿಳೆಯರು, ಮಕ್ಕಳು, ತರಕಾರಿ ಖರೀದಿಸಲು ಬಂದ ಗ್ರಾಹಕರು ಚರಂಡಿ ನೀರಿನಲ್ಲಿಯೇ ಹರಸಾಹಸ ಪಟ್ಟು ಮನೆಯತ್ತ ಹೆಜ್ಜೆ ಹಾಕಿದರು.

ನಗರದ ಕೆಲ ಹೊತ್ತು ವಾಹನ ಸವಾರರು ಪರದಾಡುವಂತೆ ಆಯಿತು. ಚರಂಡಿಗೆ ಹೊಂದಿಕೊಂಡಿರುವ ಇರುವ ಮಳಿಗೆಗೆ ನೀರು ನುಗ್ಗಿವೆ. ತಾಲ್ಲೂಕು ಪಂಚಾಯಿತಿ ನೆಲ ಮಹಡಿಯ ಮಳಿಗೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನೀರು ಸಂಗ್ರಹವಾಗಿ ಕೆರೆಯಂಗಳದಂತೆ ಆಗಿದೆ. ಅಲ್ಲದೆ ನಗರದ ಆಶ್ರಯ ಕಾಲೊನಿಯಲ್ಲಿ ಹೆಚ್ಚಾಗಿ ಗುಡಿಸಲಿನಲ್ಲಿ ವಾಸವಾಗಿರುವ ಬುಡ್ಗ, ಜಂಗಮ, ಮೀನುಗಾರರು, ಶಿಳ್ಯಾಕ್ಯಾತ ಸಮುದಾಯದ ಗುಡಿಸಲುಗಳಲ್ಲಿ ನೀರು ಹರಿದು ಪರದಾಡುವಂತೆ ಆಗಿದೆ ಎನ್ನುತ್ತಾರೆ ಮರೆಮ್ಮ.

ನಗರದ ಬಸವೇಶ್ವರ ವೃತ್ತದಿಂದ ಮೊಚಿಗಡ್ಡೆಯ ರಸ್ತೆಯ ರಾಜಗಾಲುವೆ ಇದ್ದು, ಇದೇ ರಸ್ತೆ ಎಡ ಮತ್ತು ಬಲ ಭಾಗದಲ್ಲಿ ಅಂಗಡಿ ಮುಂಗ್ಗಟ್ಟು ಇವೆ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳುವುದರ ಜೊತೆಯಲ್ಲಿ ಚರಂಡಿ ನೀರು ಸರಾಗವಾಗಿ ಸಾಗದಂತೆ ಕೆಲವು ಕಡೆ ಕಲ್ಲು ಹಾಕಿದ್ದಾರೆ. ಅಲ್ಲದೆ ಚರಂಡಿಯ ಮೇಲೆ ಮಳಿಗೆಯನ್ನು ನಿರ್ಮಿಸಿದ್ದಾರೆ. ತುಸು ಮಳೆಯಾದರೆ ಸಾಕು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ. ಚರಂಡಿಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಎಸೆಯುತ್ತಾರೆ. ಇದರಿಂದ ನೀರು ಸರಾಗವಾಗಿ ಸಾಗುತ್ತಿಲ್ಲ ಎನ್ನುತ್ತಾರೆ ನಗರದ ನಿವಾಸಿ ಮಲ್ಲಣ್ಣ ಶಿರಡ್ಡಿ.

ಮಳೆಗಾಲ ಆರಂಭವಾಗಿದ್ದು ಚರಂಡಿ ಸ್ವಚ್ಛಗೊಳಿಸುವಂತೆ ಸಾಕಷ್ಟು ಬಾರಿ ನಗರಸಭೆಯ ಸಿಬ್ಬಂದಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಕೆಲವು ಬಡಾವಣೆಯಲ್ಲಿ ಚರಂಡಿ ನೀರು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಗರಸಭೆ ಸಿಬ್ಬಂದಿ ಎಚ್ಚೆತ್ತುಕೊಂಡು ಚರಂಡಿಯನ್ನು ಸ್ವಚ್ಛಗೊಳಿಸಬೇಕು ಎಂದು ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.

ಬಸವೇಶ್ವರ ವೃತ್ತದಿಂದ ಪೊಲೀಸ್ ಠಾಣೆಯವರೆಗೆ ಅಂಗಡಿ ಮುಂಗ್ಗಟ್ಟಿನವರು ಚರಂಡಿ ಒತ್ತುವರಿ ಮಾಡಿಕೊಂಡು ಮಳಿಗೆ ನಿರ್ಮಿಸಿದ್ದಾರೆ. ನಗರಸಭೆ ಸಿಬ್ಬಂದಿ ಕ್ರಮ ತೆಗೆದುಕೊಳ್ಳಬೇಕು.

- ಮಲ್ಲಣ್ಣ ಶಿರಡ್ಡಿ, ನಗರದ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry