ಸುಮೇರು ‘ರೋಲ್‌’ ಬಿಡುಗಡೆ

7

ಸುಮೇರು ‘ರೋಲ್‌’ ಬಿಡುಗಡೆ

Published:
Updated:

ಆಹಾರ ತಯಾರಿಕಾ ಕಂಪನಿ ಸುಮೇರು ಈಚೆಗೆ ನಗರದಲ್ಲಿ ಬಗೆ ಬಗೆ ರೋಲ್‌ಗಳನ್ನು ಬಿಡುಗಡೆ ಮಾಡಿತು. ವೈಟ್‌ಫೀಲ್ಡ್‌ನ ವಿ.ಆರ್‌ ಬೆಂಗಳೂರು ಮಾಲ್‌ನ ಅಂಗಳದಲ್ಲಿ ಸುಮೇರು ಕಂಪನಿ ಉತ್ಪನ್ನಗಳ ರಾಯಭಾರಿ ಶೆಫ್‌ ಅಜಯ್‌ ಚೋಪ್ರಾ ಅವರು ಸಣ್ಣ ಮಕ್ಕಳಿಗೆ ರೋಲ್‌ ಮಾಡಿಕೊಡುವ ಮೂಲಕ ಉತ್ಪನ್ನ ಬಿಡುಗಡೆ ಮಾಡಿದರು.

ತಮ್ಮ ಕಂಪನಿ ಉತ್ಪನ್ನಗಳ ಬಗ್ಗೆ ಮಾತನಾಡಿದ ಸುಮೇರು ಕಂಪನಿ ಸಿಇಒ ಮಿಥುನ್‌ ಅಪ್ಪಯ್ಯ ಅವರು ’ನಮ್ಮಲ್ಲಿ ಎಲ್ಲ ಆಹಾರ ಉತ್ಪನ್ನಗಳನ್ನು ಶೀತ ವಾತಾವರಣದಲ್ಲಿಟ್ಟು ಕೆಡದಂತೆ ರಕ್ಷಿಸಿರುತ್ತೇವೆ. ಇದರಲ್ಲಿನ ಪೋಷಕಾಂಶಗಳು ಕಳೆದುಹೋಗದಂತೆ ಅತ್ಯಾಧುನಿಕ  ತಂತ್ರಜ್ಞಾನದ ಮೂಲಕ ಉತ್ಪನ್ನಗಳನ್ನು ಫ್ರೀಜ್‌ ಮಾಡಲಾಗುತ್ತದೆ.

ಇಲ್ಲಿ ಬಟಾಣಿ, ಜೋಳ, ತರಕಾರಿ, ಪಾಲಕ್‌ ಸೊಪ್ಪು, ಮೆಕ್ಕೆಜೋಳ, ಮಿಶ್ರ ತರಕಾರಿ ಮೊದಲಾದವುಗಳು ಪ್ಯಾಕೆಟ್‌ನಲ್ಲಿ  ಸಿಗುತ್ತವೆ. ಇದಲ್ಲದೇ ಕೋಳಿಮಾಂಸ, ಸಿಗಡಿ, ಮೀನುಗಳು ಲಭ್ಯ. ಇತ್ತೀಚೆಗೆ ಪೆರಿ ಪೆರಿ ಫ್ರೆಂಚ್‌ ಫ್ರೈಸ್‌, ಪರೋಟದಲ್ಲಿ ಬೀಟ್‌ರೂಟ್‌ ಪರೋಟ, ಓಂ ಕಾಳು ಪರೋಟ, ಪಾಲಕ್‌ ಪರೋಟ, ಮಲಬಾರ್‌ ಪರೊಟ ಹೀಗೆ 10ಕ್ಕೂ ಹೆಚ್ಚು ಬಗೆಯ ಪರೋಟಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸುಮೇರು ಕಂಪನಿಯು ಪ್ರಸಕ್ತ ವರ್ಷದಿಂದ ‘ಹಗ್ಸ್‌ ಫೌಂಡೇಷನ್‌’ ಸ್ವಯಂ ಸೇವಾ ಸಂಸ್ಥೆ ಮೂಲಕ ಸುಮಾರು 5 ಸಾವಿರ ಮಕ್ಕಳಿಗೆ ಪ್ರತಿ ತಿಂಗಳೂ ಉಚಿತ ಊಟ ಪೂರೈಸುತ್ತದೆ. ಮುಂದಿನ ದಿನಗಳಲ್ಲಿ ಬೇರೆ ಕಂಪನಿಯ ಜೊತೆಗೂ ಸಹಯೋಗ ಮಾಡಿಕೊಂಡು ಹೆಚ್ಚು ಮಕ್ಕಳಿಗೆ ಊಟ ಪೂರೈಸುವ ಗುರಿ ಈ ಕಂಪೆನಿಯದು. ಅದಕ್ಕಾಗಿ ಸುಮೇರು ‘ಪ್ಲೇಟ್‌ ಫುಲ್‌ ಆಫ್‌ ಜೊಯ್‌’ ಎಂಬ ಹೊಸ ಚಾರಿಟಿ ಆರಂಭಿಸಲಾಗಿದೆ ಎಂದು ಮಿಥುನ್‌ ಅಪ್ಪಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry