ರಫೆಲ್‌ ನಡಾಲ್‌ಗೆ 11ನೇ ಫ್ರೆಂಚ್‌ ಓಪನ್‌ ಪ್ರಶಸ್ತಿ

7

ರಫೆಲ್‌ ನಡಾಲ್‌ಗೆ 11ನೇ ಫ್ರೆಂಚ್‌ ಓಪನ್‌ ಪ್ರಶಸ್ತಿ

Published:
Updated:

ಪ್ಯಾರಿಸ್‌: ಭಾನುವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಸ್ಪೇನ್‌ನ ರಫೆಲ್‌ ನಡಾಲ್ ಗೆಲುವು ಸಾಧಿಸುವ ಮೂಲಕ 11ನೇ ಫ್ರೆಂಚ್‌ ಓಪನ್‌ ಪ್ರಶಸ್ತಿ ಮುಡಿಗೇರಿಸಿದ್ದಾರೆ.

ಆಸ್ಟ್ರೇಲಿಯಾದ ಡಾಮಿನಿಕ್ ಥೀಮ್ ಅವರನ್ನು 6–4, 6–3, 6–2 ನೇರ ಸೆಟ್‌ಗಳಿಂದ ನಡಾಲ್‌ ಮಣಿಸಿದರು.

ಒಂದೇ ಗ್ರ್ಯಾನ್‌ಸ್ಲ್ಯಾಂ ಟೂರ್ನಿಯಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಮಾರ್ಗರೆಟ್ ಕೋರ್ಟ್‌ ಅವರ ದಾಖಲೆಯನ್ನು ನಡಾಲ್‌ ಸಮಗಟ್ಟಿದ್ದಾರೆ. ಕೋರ್ಟ್ ಅವರು 1960–70ರ ದಶಕದಲ್ಲಿ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಒಟ್ಟು 11 ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry