ಮಾಜಿ ಸಚಿವ ಬಿ.ಎಸ್‌.ಪಾಟೀಲ ನಿಧನ

7

ಮಾಜಿ ಸಚಿವ ಬಿ.ಎಸ್‌.ಪಾಟೀಲ ನಿಧನ

Published:
Updated:

ವಿಜಯಪುರ: ಮಾಜಿ ಸಚಿವ ಬಿ.ಎಸ್‌.ಪಾಟೀಲ ಸಾಸನೂರ (87) ಭಾನುವಾರ ನಿಧನರಾದರು.

ಪತ್ನಿ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಸೇರಿದಂತೆ ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ಹೂವಿನ ಹಿಪ್ಪರಗಿ ಮತಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದರು. ವಯೋಸಹಜ ಅನಾರೋಗ್ಯದಿಂದಾಗಿ ನಗರದ ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು, ಸೋಮವಾರ ಮಧ್ಯಾಹ್ನ 2 ರವರೆಗೆ ತಾಳಿಕೋಟೆ ತಾಲ್ಲೂಕು ಸಾಸನೂರ ಗ್ರಾಮದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಸಂಜೆ 4ಕ್ಕೆ, ಹೀರೂರು ಗ್ರಾಮದ ಭೋಗೇಶ್ವರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry