ಆ್ಯಂಡರ್ಸನ್‌ಗೆ ಆರು ವಾರ ವಿಶ್ರಾಂತಿ

7

ಆ್ಯಂಡರ್ಸನ್‌ಗೆ ಆರು ವಾರ ವಿಶ್ರಾಂತಿ

Published:
Updated:

ಲಂಡನ್‌ (ಎಎಫ್‌ಪಿ): ‘ಬಲ ಭುಜದ ನೋವಿನಿಂದ ನರಳುತ್ತಿರುವ ಇಂಗ್ಲೆಂಡ್‌ ತಂಡದ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್ಸನ್‌ ಅವರಿಗೆ ಆರು ವಾರಗಳ ಕಾಲ ವಿಶ್ರಾಂತಿ ನೀಡಲಾಗಿದೆ’ ಎಂದು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಹೇಳಿದೆ.

‘ಮುಂದಿನ ತಿಂಗಳಿಂದ ಆರಂಭವಾಗುವ ಭಾರತ ವಿರುದ್ಧದ ಕ್ರಿಕೆಟ್‌ ಸರಣಿಗಳ ಮುನ್ನ ಸಂಪೂರ್ಣ ಫಿಟ್‌ ಆಗಲು ಆ್ಯಂಡರ್ಸನ್‌ ಅವರಿಗೆ ವಿಶ್ರಾಂತಿ ನೀಡಿದ್ದೇವೆ’ ಎಂದು ಮಂಡಳಿ ತಿಳಿಸಿದೆ.

‘ಆಗಸ್ಟ್‌ ಮೊದಲ ವಾರದಲ್ಲಿ ಭಾರತ–ಇಂಗ್ಲೆಂಡ್‌ ಟೆಸ್ಟ್‌ ಸರಣೀ ಆರಂಭವಾಗುತ್ತದೆ. ಅದಕ್ಕೂ ಮುನ್ನ ಏಕದಿನ ಹಾಗೂ ಟ್ವೆಂಟಿ–ಸರಣಿಗಳಿವೆ. ಮಹತ್ವದ ಟೆಸ್ಟ್‌ ಸರಣಿಯಲ್ಲಿ ಸಂಪೂರ್ಣ ಫಿಟ್‌ ಆಗಿ ಆ್ಯಂಡರ್ಸನ್‌ ಅವರು ಕಣಕ್ಕಿ ಳಿಯಬೇಕು. ಅವರು ನಮ್ಮ ತಂಡದ ಬೌಲಿಂಗ್‌ ಶಕ್ತಿ. ಆದ್ದರಿಂದ ಆರು ವಾರಗಳ ಅವರು ಎಲ್ಲ ರೀತಿಯ ಕ್ರಿಕೆಟ್‌ನಿಂದ ದೂರ ಉಳಿಯಲು ಅವಕಾಶ ನೀಡಲಾಗಿದೆ. ಬಲ ಭುಜದ ನೋವಿನಿಂದ ಹೊರಬರಲು ಹಲವು ಚಿಕಿತ್ಸೆಗಳನ್ನು ಅವರಿಗೆ ನೀಡಲಾಗುತ್ತದೆ’ ಎಂದು ಕೂಡ ಅದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry