ವಿಶ್ವಕಪ್‌ಗೆ ಫ್ರ್ಯಾಂಕ್‌ ಫಾಬ್ರಾ ಅಲಭ್ಯ

7
ಮಂಡಿ ನೋವಿನಿಂದ ನರಳುತ್ತಿರುವ ಕೊಲಂಬಿಯದ ಡಿಫೆಂಡರ್‌

ವಿಶ್ವಕಪ್‌ಗೆ ಫ್ರ್ಯಾಂಕ್‌ ಫಾಬ್ರಾ ಅಲಭ್ಯ

Published:
Updated:

ಬೊಗೊಟಾ (ಎಎಫ್‌ಪಿ): ಮಂಡಿ ನೋವಿನಿಂದ ನರಳುತ್ತಿರುವ ಕೊಲಂಬಿಯದ ಡಿಫೆಂಡರ್‌ ಫ್ರ್ಯಾಂಕ್‌ ಫಾಬ್ರಾ ಅವರು ವಿಶ್ವಕಪ್‌ಗೆ ಅಲಭ್ಯರಾಗಲಿದ್ದಾರೆ ಎಂದು ಕೊಲಂಬಿಯದ ಫುಟ್‌ಬಾಲ್‌ ಫೆಡರೇಷನ್‌ ಹೇಳಿದೆ.

‘ಇಟಲಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರ ಎಡಗಾಲಿನ ಮಂಡಿಗೆ ತೀವ್ರ ಸ್ವರೂಪದ ಗಾಯವಾಗಿದೆ. ತಂಡವು ರಷ್ಯಾಗೆ ತೆರಳುವ ಕೆಲವೇ ಗಂಟೆಗಳ ಮುನ್ನ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ಹಾಗೂ ಧೀರ್ಘ ಕಾಲದ ವಿಶ್ರಾಂತಿಯ ಅಗತ್ಯವಿದೆ. ಅವರಂತಹ ಪ್ರಮುಖ ಆಟಗಾರ ವಿಶ್ವಕಪ್‌ ತಂಡದಲ್ಲಿ ಆಡಲು ಸಾಧ್ಯವಿಲ್ಲ ಎಂಬುದು ಬೇಸರದ ಸಂಗತಿ’ ಎಂದು ಫೇಡರೇಷನ್‌ ತಿಳಿಸಿದೆ.

‘ವಿಶ್ವಕಪ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಕೊನೆ ಸಮಯದಲ್ಲಿ ಗಾಯಗೊಂಡೆ. ವಿಶ್ವಕಪ್‌ನಲ್ಲಿ ಆಡಲು ಸಾದ್ಯವಿಲ್ಲ ಎಂಬ ಸಂಗತಿ ತೀವ್ರ ನೋವು ತಂದಿದೆ’ ಎಂದು ಫಾಬ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಕೊಲಂಬಿಯ ತಂಡವು ಎಚ್‌ ಗುಂಪಿನಲ್ಲಿದೆ. ಜೂನ್‌ 19ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಅದು ಜಪಾನ್‌ ತಂಡವನ್ನು ಎದುರಿಸಲಿದೆ. ಈ ಗುಂಪಿನಲ್ಲಿ ಪೋಲೆಂಡ್‌ ಹಾಗೂ ಸೆನೆಗಲ್‌ ತಂಡಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry