ಸೀನಿಯರ್ ಕೌನ್ಸಿಲ್‌: ನಿಯಮ ಪ್ರಕಟ

7

ಸೀನಿಯರ್ ಕೌನ್ಸಿಲ್‌: ನಿಯಮ ಪ್ರಕಟ

Published:
Updated:

ಬೆಂಗಳೂರು: ‘ಹಿರಿಯ ವಕೀಲ’ (ಸೀನಿಯರ್ ಕೌನ್ಸಿಲ್) ಎಂಬ ವಿಶೇಷ ಸ್ಥಾನಮಾನಕ್ಕೆ ಭಾಜನರಾಗುವುದಕ್ಕೆ ಸಂಬಂಧಿಸಿದಂತೆ, ‘ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲರ ನಿಯಮ–2018’ ಅನ್ನು ರಾಜ್ಯ ಹೈಕೋರ್ಟ್ ಪ್ರಕಟಿಸಿದೆ.

2017ರ ಅಕ್ಟೋಬರ್ 12ರಂದು ಸುಪ್ರೀಂ ಕೋರ್ಟ್‌ ಹೊರಡಿಸಿದ ಮಾರ್ಗದರ್ಶಿ ನಿಯಮಗಳ ಅನುಸಾರ ಈ ಕಾಯ್ದೆಗಳನ್ನು ರೂಪಿಸಲಾಗಿದ್ದು ಜೂನ್ 8ರಂದು ಈ ಕುರಿತಂತೆ ಅಧಿಸೂಚನೆ ಹೊರಡಿಸಲಾಗಿದೆ.

ಹಿರಿಯ ವಕೀಲರ ಸ್ಥಾನಕ್ಕೆ ಅರ್ಹರನ್ನಾಗಿಸಲು ಕೋರಿ ಸಲ್ಲಿಸಬಹುದಾದ ಪ್ರಸ್ತಾವನೆ ನಮೂನೆ, ಅರ್ಜಿ ನಮೂನೆ ಹಾಗೂ ಅಂಕಗಳ ಮೌಲ್ಯಮಾಪನ ನಮೂನೆಯನ್ನೂ ಪ್ರಕಟಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಹೈಕೋರ್ಟ್ ಅಧಿಕೃತ ವೆಬ್‌ಸೈಟ್ http://karnatakajudiciary.kar.nic.in/ಗೆ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry