ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಯಸಿಗಾಗಿ ಕಳ್ಳನಾದ!

ಜಾಲಿರೈಡ್‌ ಹೋಗಿ ಬಂದ ಕೂಡಲೇ ಬೈಕ್ ಮಾರುತ್ತಿದ್ದ ಕಾರ್ತಿಕ್
Last Updated 4 ಅಕ್ಟೋಬರ್ 2018, 18:58 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೇಯಸಿ ಜತೆ ಸುತ್ತಾಟಕ್ಕೆ ಹೋಗುವ ಹಾಗೂ ಆಕೆ ಇಷ್ಟಪಟ್ಟಿದ್ದನ್ನು ಕೊಡಿಸುವ ಸಲುವಾಗಿಯೇ ದುಬಾರಿ ಮೌಲ್ಯದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಹುಚ್ಚು ಪ್ರೇಮಿಯೊಬ್ಬ ಕೋರಮಂಗಲ ಪೊಲೀಸರ ಅತಿಥಿಯಾಗಿದ್ದಾನೆ.

ಬೊಮ್ಮನಹಳ್ಳಿಯ ಕಾರ್ತಿಕ್ ಅಲಿಯಾಸ್ ಕಾಕಾ (26) ಎಂಬಾತನನ್ನು ಬಂಧಿಸಿ, ₹ 6 ಲಕ್ಷ ಮೌಲ್ಯದ ಎಂಟು ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 15 ವಾಹನಗಳವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೇಯಸಿಯನ್ನು ಮೆಚ್ಚಿಸಲು: ಪ್ರಕರಣ ವೊಂದರಲ್ಲಿ ಜೈಲು ಸೇರಿದ್ದ ಕಾರ್ತಿಕ್, ಇದೇ ಫೆಬ್ರುವರಿಯಲ್ಲಿ ಬಿಡುಗಡೆಯಾಗಿದ್ದ. ಆಗ ಆತನಿಗೆ ಯುವತಿಯೊಬ್ಬಳ ಪರಿಚಯವಾಗಿ, ಪ್ರೀತಿಗೆ ತಿರುಗಿತ್ತು. ‘ನಾನು ಕೊರಿಯರ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತೇನೆ. ನಾನು ಬೈಕ್‌ ಪ್ರೇಮಿ. ನನ್ನ ಬಳಿ ದುಬಾರಿ ಬೆಲೆಯ ಆರು ಬೈಕ್‌ಗಳಿವೆ’ ಎಂದು ಪ್ರೇಯಸಿ ಬಳಿ ಸುಳ್ಳು ಹೇಳಿದ್ದ. ಆಗ ಆಕೆ, ಆಗಾಗ್ಗೆ ತನ್ನನ್ನು ಜಾಲಿರೈಡ್ ಕರೆದು
ಕೊಂಡು ಹೋಗುವಂತೆ ತಿಳಿಸಿದ್ದಳು.

ಅದಕ್ಕೆ ಒಪ‍್ಪಿಕೊಂಡ ಕಾರ್ತಿಕ್, ‍ರಾತ್ರಿ ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಪಲ್ಸರ್ ಹಾಗೂ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳನ್ನು ಕದಿಯಲು ಶುರು ಮಾಡಿದ್ದ. ಪ್ರತಿ ಬಾರಿಯೂ ಒಂದೊಂದು ಬೈಕ್‌ನಲ್ಲಿ ಪ್ರೇಯಸಿಯನ್ನು ಜಾಲಿರೈಡ್‌ಗೆ ಕರೆದುಕೊಂಡು ಹೋಗುತ್ತಿದ್ದ ಆತ, ಮರುದಿನವೇ ಆ ಬೈಕ್ ಮಾರಾಟ ಮಾಡಿ ಬಂದ ಹಣದಲ್ಲಿ ಪ್ರೇಯಸಿ ಜತೆ ಶಾಪಿಂಗ್ ಮಾಡುತ್ತಿದ್ದ.

ಈ ಹಿಂದೆ ಕಾರ್ತಿಕ್ ಕೋರಮಂಗಲ 5ನೇ ಅಡ್ಡರಸ್ತೆಯಿಂದ ಬುಲೆಟ್ ಬೈಕ್ ಕದ್ದಿದ್ದ. ಸಿ.ಸಿ ಟಿ.ವಿಯಲ್ಲಿ ಆತನ ಚಹರೆ ಸೆರೆಯಾಗಿತ್ತು. ಹಳೆ ಆರೋಪಿಯಾಗಿದ್ದರಿಂದ ನಗರ ಅಪರಾಧ ದಾಖಲಾತಿ ಘಟಕದಲ್ಲಿ ಆತನ ಪೂರ್ವಾಪರ ಸಂಗ್ರಹಿಸಿ, ಮನೆಯಿಂದಲೇ ಬಂಧಿಸಿ
ದೆವು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಯಸಿ ಪೀಡಿಸುತ್ತಿದ್ದಳು

‘ಶಾಪಿಂಗ್‌ಗೆ ಕರೆದುಕೊಂಡು ಹೋಗುವಂತೆ ಪ್ರೇಯಸಿ ಪದೇ ಪದೇ ಪೀಡಿಸುತ್ತಿದ್ದಳು. ನನ್ನ ಬಳಿ ದುಡ್ಡಿಲ್ಲ ಎಂದು ಹೇಳುವುದಕ್ಕೆ ಮನಸ್ಸಾಗುತ್ತಿರಲಿಲ್ಲ. ಹಣ ಹೊಂದಿಸುವುದಕ್ಕೆ ನನಗೆ ಬೇರೆ ಮಾರ್ಗವೂ ಇರಲಿಲ್ಲ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT