‘ಆಮಿಷಗಳಿಗೆ ಪತ್ರಿಕೆಗಳು ಬಲಿ’

7

‘ಆಮಿಷಗಳಿಗೆ ಪತ್ರಿಕೆಗಳು ಬಲಿ’

Published:
Updated:

ಬೆಂಗಳೂರು: ‘ಇಂದಿನ ಪತ್ರಿಕೆಗಳು ತಮ್ಮ ಧ್ಯೇಯ, ಆದರ್ಶಗಳನ್ನು ಮರೆತು, ಆಮಿಷಗಳಿಗೆ ಬಲಿಯಾಗುತ್ತಿವೆ’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ವಿಷಾದಿಸಿದರು.

ನಗರದ ಕನ್ನಡ ಭವನದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಜೀವನ್ಮುಖಿ’ ಕನ್ನಡ ಪಾಕ್ಷಿಕ ಪತ್ರಿಕೆಯ 8ನೇ ವಾರ್ಷಿಕೋತ್ಸವದ ವಿಶೇಷ ಸಂಚಿಕೆ ಬಿಡುಗಡೆ ಮತ್ತು ‘ಜೀವನ್ಮುಖಿ’ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‌

‘ಪತ್ರಿಕೆಗಳು ನಿಷ್ಪಕ್ಷಪಾತ ವರದಿ ಮಾಡುತ್ತಿಲ್ಲ. ಚುಣಾವಣೆಗಳಲ್ಲಿ, ಅಧಿಕಾರಕ್ಕಾಗಿ ರಾಜಕಾರಣಿಗಳು ಏನೆಲ್ಲ ಲಾಬಿ ನಡೆಸುತ್ತಾರೆ, ಎಲ್ಲೆಲ್ಲಿ ಏನೇನಾಯ್ತು ಎಂಬುದನ್ನು ವರದಿ ಮಾಡುತ್ತವೆ. ಆದರೆ, ಅವರ ನಡೆಯನ್ನು ಪ್ರಶ್ನಿಸುವ ಕಾರ್ಯವನ್ನು ಏಕೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.‌

ಪತ್ರಕರ್ತ ಮತ್ತು ಮಾಜಿ ವಿಧಾನಪರಿಷತ್‌ ಸದಸ್ಯ ಪಿ.ರಾಮಯ್ಯ‌, ಆಗ್ನೇಯ ವಿಭಾಗದ ಪೊಲೀಸ್‌ ಆಯುಕ್ತ  ಎಂ.ಬಿ.ಬೋರಲಿಂಗಯ್ಯ, ಜಿಎಸ್‌ಟಿ ಉಪ ಆಯುಕ್ತ ಡಾ.ಸಿ.ಸೋಮಣ್ಣ, ಸಮಾಜ ಸೇವಕ ಪಿ.ಚಂದ್ರವೇಲು ಅವರಿಗೆ ‘ಜೀವನ್ಮುಖಿ’ ಪ್ರಶಸ್ತಿ ಮತ್ತು ಪ್ರತಿಭಾವಂತ ಮಕ್ಕಳಿಗೆ ‘ಜೀವನ್ಮುಖಿ ಪ್ರತಿಭಾ ಪುರಸ್ಕಾರ’ ನೀಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ.ಆರ್‌.ನಲ್ಲೂರ್‌ ಪ್ರಸಾದ್‌ ಕಾರ್ಯಕ್ರಮ ಉದ್ಘಾಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry