ಹತಾಶೆಯ ಮಾತು

7

ಹತಾಶೆಯ ಮಾತು

Published:
Updated:

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ‘ನನಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ, ನಾನೇಕೆ ಮಂತ್ರಿ ಪದವಿ ಬಯಸಲಿ’ ಎಂದಿರುವುದು ವರದಿಯಾಗಿದೆ. ಈ ‘ಶ್ರಿಮಂತಿಕೆಯ’ ಮಾತನ್ನು ಯಾವ ರೀತಿಯಾಗಿ ಅರ್ಥೈಸಿಕೊಳ್ಳಬೇಕೆಂದು ತಿಳಿಯುತ್ತಿಲ್ಲ.

ರಾಜಕೀಯ ಮಾಡುವುದು ಹಣಕ್ಕಾಗಿಯೋ ಅಥವಾ ಅದು ಸಮಾಜ ಸೇವೆಯೋ? ಒಂದು ವೇಳೆ ಹಣ ಮಾಡುವುದೇ ಉದ್ದೇಶ ಎಂದಾದರೆ, ಈಗಾಗಲೇ ಶ್ರೀಮಂತರಾಗಿದ್ದು, ಐಷಾರಾಮಿ ಜೀವನ ನಡೆಸುವವರೂ ಶಾಸಕ, ಸಂಸದರಾಗಲು ಹಾತೊರೆಯುವುದೇಕೆ?

ಶಾಮನೂರು ಅವರನ್ನ ಮಂತ್ರಿಮಂಡಲದಿಂದ ಕೈಬಿಟ್ಟ ಕೂಡಲೇ ಮಂತ್ರಿ ಪದವಿ ಎಂಬುದು ದುಡ್ಡು ಮಾಡುವ ಹುದ್ದೆಯಾಯಿತೇ? ಹಾಗಿದ್ದರೆ ಶಾಮನೂರರು ಡಿಸಿಎಂ ಹುದ್ದೆ ಬಯಸಿದ್ದರ ಉದ್ದೇಶವೇನು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry