ಮತಗಟ್ಟೆ ಸಿ.ಸಿ.ಟಿ.ವಿ ಕ್ಯಾಮೆರಾ ಕಳವು

7
ಎಸ್‌ಬಿಎಂ ಕಾಲೊನಿಯಲ್ಲಿ ಅಳವಡಿಕೆ

ಮತಗಟ್ಟೆ ಸಿ.ಸಿ.ಟಿ.ವಿ ಕ್ಯಾಮೆರಾ ಕಳವು

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಶವಂತಪುರದ ಎಸ್‌ಬಿಎಂ ಕಾಲೊನಿಯ ಮತಗಟ್ಟೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ

ವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಈ ಸಂಬಂಧ ‘ಅಕಿಯೊ ಬ್ಯುಸಿನೆಸ್ ಸಲ್ಯೂಷನ್ ಕಂಪನಿ’ಯ ಎಚ್‌.ಎಸ್‌.ನಾಗರಾಜ್, ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ.

‘ಚುನಾವಣೆ ವೇಳೆ ಮತಗಟ್ಟೆಗಳಿಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುವ ಜವಾಬ್ದಾರಿಯನ್ನು ಕಂಪನಿಗೆ ವಹಿಸಲಾಗಿತ್ತು. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ರಂದು ನಡೆದಿತ್ತು. ಆ ಕ್ಷೇತ್ರ ವ್ಯಾಪ್ತಿಗೆ ಬರುವ ಎಸ್‌ಬಿಎಂ ಕಾಲೊನಿಯ 5ಎಚ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆ ಹೊರಗೆ ಮೇ 26ರಂದೇ ಕ್ಯಾಮೆರಾ ಅಳವಡಿಸಲಾಗಿತ್ತು. ಚುನಾವಣೆ ಮುಗಿಯುತ್ತಿದ್ದಂತೆ ಕಂಪನಿಯವರು ಕ್ಷೇತ್ರದ ಎಲ್ಲ ಮತಗಟ್ಟೆಗಳ ಕ್ಯಾಮೆರಾಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಎಸ್‌ಬಿಎಂ ಕಾಲೊನಿ ಮತಗಟ್ಟೆಯಲ್ಲಿದ್ದ ಕ್ಯಾಮೆರಾ ಕಳುವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮೇಲಿಂದ ಮೇಲೆ ಮತಗಟ್ಟೆಗೆ ಹೋಗಿ ಕ್ಯಾಮೆರಾ ಪರಿಶೀಲನೆ ಮಾಡುತ್ತಿದ್ದೆವು. ಸಂಜೆ ಸ್ಥಳಕ್ಕೆ ಹೋದಾಗ ಕ್ಯಾಮೆರಾ ಇರಲಿಲ್ಲ ಎಂದು ದೂರುದಾರರು ಹೇಳಿದ್ದಾರೆ. ಅಂದು ಮತಗಟ್ಟೆಯ ಸಾಮಗ್ರಿಗಳನ್ನೆಲ್ಲ ಬಿಬಿಎಂಪಿ ಸಿಬ್ಬಂದಿಯೇ ಸ್ಥಳಾಂತರಿಸಿದ್ದಾರೆ. ಅವರೇ ಕ್ಯಾಮೆರಾ ತೆಗೆದುಕೊಂಡು ಹೋಗಿರುವ ಅನುಮಾನವಿದ್ದು, ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದೇವೆ’ ಎಂದು ವಿವರಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry