ಬಜ್ಜಿ ತಂದು ಕೊಡದಿದ್ದಕ್ಕೆ ಹಲ್ಲೆ

7

ಬಜ್ಜಿ ತಂದು ಕೊಡದಿದ್ದಕ್ಕೆ ಹಲ್ಲೆ

Published:
Updated:

ಬೆಂಗಳೂರು: ಹೋಟೆಲ್‌ನಿಂದ ಬಜ್ಜಿ ತಂದುಕೊಡಲಿಲ್ಲ ಎನ್ನುವ ಕಾರಣಕ್ಕೆ ಯುವಕನೊಬ್ಬನ ಮೇಲೆ ಮೂವರು ಹಲ್ಲೆ ನಡೆಸಿರುವ ಬಗ್ಗೆ ಎಚ್‌.ಎ.ಎಲ್‌. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂಡಲಹಳ್ಳಿಯ ಅಮರಾವತಿ ಹೋಟೆಲ್‌ ಬಳಿ ಪ್ರಕರಣ ನಡೆದಿದ್ದು, ಹಲ್ಲೆಗೊಳಗಾಗಿರುವ ನಿವಾಸಿ ವೆಂಕಟ ಚಲಪತಿ ದೂರು ನೀಡಿದ್ದಾರೆ.‌

’ಇದೇ 3ರಂದು ರಾತ್ರಿ 11.30ರ ಸುಮಾರಿಗೆ ಪಿ.ಜಿಯಿಂದ ಹೋಟೆಲ್‌ಗೆ ಬರುವಾಗ ಮೆಟ್ಟಿಲುಗಳ ಮೇಲೆ ಆಟೊ ವೆಂಕಿ ಮತ್ತು ಆತನ ಸ್ನೇಹಿತರು ಕುಳಿತು ಮದ್ಯಪಾನ ಮಾಡುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಈ ಸಂದರ್ಭದಲ್ಲಿ ನನ್ನನ್ನು ಕರೆದು ಮೊಘಲ್‌ ಹೋಟೆಲ್‌ನಿಂದ ಬಜ್ಜಿ ತರಲು ತಿಳಿಸಿದರು. ಅದಕ್ಕೆ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ಬೈದರು. ಏಕೆ ಬೈಯುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ಮೂವರು ಸೇರಿ ಮೊದಲು ಒದ್ದು, ಬಳಿಕ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry