ಉತ್ತರಪ್ರದೇಶ: ಅಪಘಾತಕ್ಕೀಡಾದ ಪ್ರವಾಸಿ ಬಸ್ಸ್, 7 ವಿದ್ಯಾರ್ಥಿಗಳ ದುರ್ಮರಣ

7

ಉತ್ತರಪ್ರದೇಶ: ಅಪಘಾತಕ್ಕೀಡಾದ ಪ್ರವಾಸಿ ಬಸ್ಸ್, 7 ವಿದ್ಯಾರ್ಥಿಗಳ ದುರ್ಮರಣ

Published:
Updated:

ಆಗ್ರಾ: ಉತ್ತರಪ್ರದೇಶದ ಲಕ್ನೋ–ಆಗ್ರಾ ಹೆದ್ದಾರಿಯ ಕನೌಜ್ ಹತ್ತಿರ ಪ್ರವಾಸದ ಬಸ್ಸು ಅಪಘಾತಕ್ಕೀಡಾಗಿದ್ದು, ಶಿಕ್ಷಕಿ ಸೇರಿದಂತೆ ಏಳು ಮಂದಿ ವಿದ್ಯಾರ್ಥಿಗಳು ದುರ್ಮರಣಕ್ಕೀಡಾಗಿದ್ದಾರೆ.

ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವಿದ್ಯಾರ್ಥಿಗಳು ಬಿಟಿಸಿ ಕಾಲೇಜಿನವರಾಗಿದ್ದು, ಹರಿದ್ವಾರಕ್ಕೆ ತೆರಳುತ್ತಿದ್ದರು. ಆಗ ಬಸ್ಸಿನಲ್ಲಿ ಡೀಸೆಲ್ ಖಾಲಿಯಾದ ಕಾರಣ ರಸ್ತೆಯ ಬದಿ ಬಸ್ಸನ್ನು ನಿಲ್ಲಿಸಿ ಇನ್ನೊಂದು ಬಸ್ಸಿನಿಂದ ಡೀಸೆಲ್ ತೆಗೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರವಾಸಿಗರು ಬಸ್ಸಿನಿಂದ ಹೊರಗೆ ಬಂದು ನಿಂತಿದ್ದರು. ಈ ವೇಳೆ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಘಟನೆ ನಂತರ ಬಸ್ಸಿನ ಚಾಲಕ ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ  2 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry