ಅವೈಜ್ಞಾನಿಕ ಚರಂಡಿ ನಿರ್ಮಾಣ ಜನರ ಪರದಾಟ

7

ಅವೈಜ್ಞಾನಿಕ ಚರಂಡಿ ನಿರ್ಮಾಣ ಜನರ ಪರದಾಟ

Published:
Updated:

ಅಫಜಲಪುರ: ಪಟ್ಟಣದ 20 ವಾರ್ಡ್‌ಗಳಲ್ಲಿ ಪುರಸಭೆಯವರು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದರಿಂದ ಮಾಲಿನ್ಯದ ನೀರು ಹರಿದು ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿದ್ದು, ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಮಾಲಿನ್ಯ ನೀರು ಸರಳವಾಗಿ ಹರಿದು ಹೋಗುವಂತೆ ಪಟ್ಟಣದ 20 ವಾರ್ಡ್‌ಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತದೆ. ಕುಡಿಯುವ ನೀರು ಪೊರೈಕೆಗಾಗಿ ನಳಗಳಿಗಾಗಿ ತಗ್ಗು ತೋಡಿದ್ದು, ಅದೇ ತಗ್ಗಿನಲ್ಲಿ ಮಾಲಿನ್ಯದ ನೀರು ಸೇರಿಕೊಳ್ಳುತ್ತಿದೆ ಅದೇ ನೀರನ್ನು ಜನರು ಕುಡಿಯುತ್ತಾರೆ.

ಚರಂಡಿ ನಿರ್ಮಾಣಕ್ಕಾಗಿ ಸಾಕಷ್ಟು ಅನುದಾನ ಖರ್ಚು ಮಾಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ಜನರು ಚರಂಡಿ ನೀರಿನಿಂದ ಬೇಸತ್ತು ಹೋಗಿದ್ದಾರೆ. 3 ತಿಂಗಳ ಹಿಂದೆ ಅಫಜಲಪುರ ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡುವುದು ಮತ್ತು ಮಾಸ್ಟರ್ ಪ್ಲ್ಯಾನ್ ಮಾಡುವುದಕ್ಕಾಗಿ ಸಮೀಕ್ಷೆ ನಡೆಸಲಾಗಿತ್ತು. ಸದ್ಯಕ್ಕೆ ವಿಭಾಗೀಯ ಅಧಿಕಾರಿಗಳಾಗಿರುವ ಪಂಕಜ ಕುಮಾರ ಪಾಂಡೆ ಅಧಿಕಾರ ವಹಿಸಿಕೊಂಡಿದ್ದು, ಮಾಸ್ಟರ್ ಪ್ಲ್ಯಾನ್ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry