ಆರ್‌ಟಿಇ: ಮಕ್ಕಳಿಗೆ ಪರ್ಯಾಯ ವ್ಯವಸ್ಥೆ

7
ರಾಕೇಶ್‌ ಸಿದ್ದರಾಮಯ್ಯ ಶಿಕ್ಷಣ ಸಂಸ್ಥೆ

ಆರ್‌ಟಿಇ: ಮಕ್ಕಳಿಗೆ ಪರ್ಯಾಯ ವ್ಯವಸ್ಥೆ

Published:
Updated:

ಕಕ್ಕೇರಾ: ಪಟ್ಟಣದ ರಾಕೇಶ್‌ ಸಿದ್ದರಾಮಯ್ಯ ಶಿಕ್ಷಣ ಸಂಸ್ಥೆಗೆ ಈಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೇಕಾರ  ಭೇಟಿ ನೀಡಿ, ಶಾಲೆಯ ದಾಖಲೆಗಳ ಪರಿಶೀಲನೆ ನಡೆಸಿದರು.

‘ಇಲ್ಲಿನ ಶಾಲೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಶಾಲೆಯ →ವಸ್ತುಸ್ಥಿತಿಯ ಬಗ್ಗೆ ವರದಿ ತಯಾರಿಸಿ ಮೇಲಾಧಿಕಾರಿಗೆ →ನೀಡಲಾಗುವುದು’ ಎಂದು ಬಿಇಒ ನಾಗರತ್ನ ಓಲೇಕಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆರ್‌ಟಿಇ ಅಡಿಯಲ್ಲಿ ಈ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಬೇರೆ ಶಾಲೆಯಲ್ಲಿ ದಾಖಲಾತಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಆರ್‌ಟಿಇ ಅಡಿಯಲ್ಲಿ ರಾಕೇಶ ಸಿದ್ದರಾಮಯ್ಯ ಶಿಕ್ಷಣ ಸಂಸ್ಥೆಗೆ ಆಯ್ಕೆಯಾದ ಮಕ್ಕಳ ಪರದಾಟದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ‘ಆರ್‌ಟಿಇ ಶಾಲೆ ಪ್ರವೇಶಕ್ಕೆ ಅಲೆದಾಟ’ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು.

ಈರಪ್ಪ ಕನ್ನೆಳ್ಳಿ, ಭೀಮಣ್ಣ ನಾಯ್ಕೋಡಿ, ಬಾಲಕೃಷ್ಣ, ರವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry