ಕಳಸ: ಮನೆ ಮೇಲೆ ಮರ ಬಿದ್ದು ಬಾಲಕಿಗೆ ಗಾಯ

7

ಕಳಸ: ಮನೆ ಮೇಲೆ ಮರ ಬಿದ್ದು ಬಾಲಕಿಗೆ ಗಾಯ

Published:
Updated:
ಕಳಸ: ಮನೆ ಮೇಲೆ ಮರ ಬಿದ್ದು ಬಾಲಕಿಗೆ ಗಾಯ

ಕಳಸ: ಭಾರಿ ಮಳೆ ಮತ್ತು ಗಾಳಿಯಿಂದಾಗಿ ಮನೆಯ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಬಾಲಕಿಗೆ ಗಾಯವಾದ ಘಟನೆ ಇಲ್ಲಿಗೆ ಸಮೀಪದ ಕಗ್ಗನಳ್ಳದ ಪಡೀಲು ಗ್ರಾಮದಲ್ಲಿ ಶನಿವಾರ ನಡೆದಿದೆ.

ಕೂಲಿ ಕಾರ್ಮಿಕ ಪ್ರಸಾದ್ ಮತ್ತು ಪವಿತ್ರ ದಂಪತಿಯ ಮನೆ ಮೇಲೆ ಸಮೀಪದಲ್ಲೇ ಇದ್ದ ದೊಡ್ಡ ಗಾತ್ರದ ಬೀಟೆ ಮರ ಬೆಳಗಿನ ಜಾವ ಬಿದ್ದಿದೆ. ಇದರಿಂದಾಗಿ ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮನೆಯಲ್ಲಿದ್ದ 10 ವರ್ಷದ ಬಾಲಕಿ ಪ್ರಜ್ಞಾ ಮೈಮೇಲೆ ಮನೆಯ ಸಾಮಗ್ರಿಗಳು ಬಿದ್ದು ಆಕೆಯ ಕೈ ಮುರಿದಿದೆ. ಕಳಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳಸ ಕಂದಾಯ ನಿರೀಕ್ಷಕ ರತ್ನಾಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಪರಿಹಾರ ದೊರಕುವ ವಿಶ್ವಾಸ ಇದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry