ಕಸ ಸಾಗಣೆ ವಾಹನಗಳ ಮುಷ್ಕರ: ತ್ಯಾಜ್ಯ ವಿಲೇವಾರಿ ಸ್ಥಗಿತ

7

ಕಸ ಸಾಗಣೆ ವಾಹನಗಳ ಮುಷ್ಕರ: ತ್ಯಾಜ್ಯ ವಿಲೇವಾರಿ ಸ್ಥಗಿತ

Published:
Updated:
ಕಸ ಸಾಗಣೆ ವಾಹನಗಳ ಮುಷ್ಕರ: ತ್ಯಾಜ್ಯ ವಿಲೇವಾರಿ ಸ್ಥಗಿತ

ಬೆಂಗಳೂರು: ಬಾಕಿ ಬಿಲ್‌ ಪಾವತಿಯೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಸ ಸಾಗಣೆ ವಾಹನ ಮಾಲೀಕರುಇಲ್ಲಿ ಸೋಮವಾರ ಮುಷ್ಕರ ಆರಂಭಿಸಿದ್ದಾರೆ.

ಬೆಳಿಗ್ಗೆಯಿಂದ ಜಯನಗರ ಹೊರತುಪಡಿಸಿ ಭುವನೇಶ್ವರಿ ನಗರ, ವಿಜಯನಗರದ ಸುತ್ತಮುತ್ತ ಸೇರಿದಂತೆ ಬೇರೆ ಪ್ರದೇಶಗಳಲ್ಲಿ ಕಸದ ಸಾಗಾಟ ನಡೆದಿಲ್ಲ.

'ನಾವು ಕೆಲಸ ಮಾಡಿದ್ದೇವೆ. ಆದರೆ ಗಂಡುಮಕ್ಕಳು (ಪುರುಷ ಕಾರ್ಮಿಕರು) ಕೆಲಸಕ್ಕೆ ಬಂದಿಲ್ಲ. ಕಸ ಒಯ್ಯುವ ಗಾಡಿಗಳು ಬಂದಿಲ್ಲ. ಹಾಗಾಗಿ ಚೀಲಗಳಲ್ಲಿ ತುಂಬಿಟ್ಟಿದ್ದೇವೆ' ಎಂದು ಕಗ್ಗದಾಸಪುರದ ಪೌರ ಕಾರ್ಮಿಕರಾದ ಮಾರಕ್ಕ ಮತ್ತು ಲಕ್ಷ್ಮವ್ವ ಹೇಳಿದರು.

ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಎಸ್.ಎನ್.ಬಾಲಕೃಷ್ಣನ್ ಮಾತನಾಡಿ, ‘ಭಾನುವಾರ ಸಂಜೆಯವರೆಗೆ ಕಸ ವಿಲೇವಾರಿ ಮಾಡಿದ್ದೇವೆ. ಹಾಗಾಗಿ ಇಂದು ಸಮಸ್ಯೆ ಅಷ್ಟು ತೀವ್ರವಾಗಿ ಗೋಚರಿಸಲಿಲ್ಲ. ಬಿಬಿಎಂಪಿ ಹಾಗೂ ಸಚಿವರು ಸೇರಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಸಮಸ್ಯೆ ತೀವ್ರವಾಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry