ಗುರುವಾರ , ಜುಲೈ 7, 2022
20 °C

ಓದುವ ಕೋಣೆ ತಂಪಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದುವ ಕೋಣೆ ತಂಪಾಗಿರಲಿ

ಉಷ್ಣ ವಾತಾವರಣದಲ್ಲಿ ಅಧ್ಯಯನ ಮಾಡುವುದರಿಂದ ಮಕ್ಕಳ ಕಲಿಕಾ ಮಟ್ಟ ಕುಗ್ಗುತ್ತದೆ ಎಂದು ಹಾರ್ವರ್ಡ್‌ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚು ಉಷ್ಣತೆ ಇರುವ ಜಾಗದಲ್ಲಿ ಕುಳಿತು ಓದುವ ಮಕ್ಕಳಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಹೋಂವರ್ಕ್‌ ಮೇಲೂ ಗಮನ ಇರುವುದಿಲ್ಲ ಎಂದು ಹೇಳಿದ್ದಾರೆ.

ಕೊಠಡಿಯ ಉಷ್ಣತೆ 21 ಡಿಗ್ರಿ ಸೆಲ್ಸಿಯಸ್‌ಗಿಂತ, ಪ್ರತಿ 0.55 ಡಿಗ್ರಿ ಹೆಚ್ಚಾದಂತೆ ಅಂಕ ಗಳಿಕೆಯಲ್ಲಿ ಶೇ 1ರಷ್ಟು ಇಳಿಕೆಯಾಗುತ್ತದೆ. ಸುಮಾರು 1 ಕೋಟಿ ವಿದ್ಯಾರ್ಥಿಗಳ ಹದಿಮೂರು ವರ್ಷಗಳ ಪರೀಕ್ಷಾ ಫಲಿತಾಂಶವನ್ನು ತುಲನೆ ಮಾಡಲಾಗಿದೆ. ಆಗ ಈ ಅಂಶ ಬೆಳಕಿಗೆ ಬಂದಿದೆ ಎಂದು ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಮಕ್ಕಳು ಅಧ್ಯಯನ ನಡೆಸುವ ಕೊಠಡಿಗಳನ್ನು ತಂಪಾಗಿ ಇಡಿ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ. ಹೆಚ್ಚು ಉಷ್ಣತೆ ಇದ್ದರೆ ಓದಿನ ಕಡೆ ಗಮನ ಇರುವುದಿಲ್ಲ. ಶಾಲೆಯಿಂದ ಮನೆಗೆ ಬಂದ ನಂತರ ಹೋಂವರ್ಕ್‌ ಮೇಲೂ ಗಮನ ಇರುವುದಿಲ್ಲ ಎಂದು ಅವರು

ಎಚ್ಚರಿಸಿದ್ದಾರೆ.

ಹೆಚ್ಚು ಚಳಿ ಇರುವ ದಿನಗಳು ಅಧ್ಯಯನದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ವಾತಾವರಣದ ಉಷ್ಣತೆ 32 ಡಿಗ್ರಿ ದಾಟಿದ ತಕ್ಷಣ ಏಕಾಗ್ರತೆ ಇಳಿಮುಖವಾಗುತ್ತದೆ. 38 ಡಿಗ್ರಿ ದಾಟಿದರೆ ಪ್ರಗತಿಯ ಮಟ್ಟ ಇನ್ನಷ್ಟು ಇಳಿಯುತ್ತದೆ ಎಂಬುದನ್ನು ಸಂಶೋಧಕರು ಗುರುತಿಸಿದ್ಧಾರೆ.

ಹೆಚ್ಚು ಉಷ್ಣತೆ ಇದ್ದ ವರ್ಷಗಳಿಗೆ ಹೋಲಿಸಿದರೆ ಹೆಚ್ಚು ಚಳಿ ಇದ್ದ ವರ್ಷಗಳಲ್ಲಿ ಮಕ್ಕಳ ಅಂಕ ಗಳಿಕೆಯ ಪ್ರಮಾಣ ಹೆಚ್ಚಾಗಿದೆ ಎಂದು

‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಉಷ್ಣ ವಾತಾವರಣದಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವಾಗುತ್ತದೆ ಎಂದು ಹಾರ್ವರ್ಡ್‌ ಕೆನಡಿ ಸ್ಕೂಲ್‌ನ ಸಹಾಯಕ ಪ್ರಾಧ್ಯಾಪಕ ಜೋಶುಅ ಗುಡ್‌ಮನ್‌ ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.