ಪ್ರೇಮದ ‘ಧಡಕ್’ ಟ್ರೇಲರ್ ಬಿಡುಗಡೆ

7

ಪ್ರೇಮದ ‘ಧಡಕ್’ ಟ್ರೇಲರ್ ಬಿಡುಗಡೆ

Published:
Updated:

ನನಗೆ ದೊಡ್ಡ ಕೋಟೆ ಬೇಡ..ಸಣ್ಣ ಗುಡಿಸಲು ಸಾಕು. ಅದು ನಮ್ಮ ಮನೆ ಆಗಿರಬೇಕು ಎಂಬ ಪ್ರಿಯತಮೆಯ ಸಂಭಾಷಣೆಯ ಮೂಲಕ ತೆರೆದುಕೊಳ್ಳುವ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ’ದಢಕ್’ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ.

ಬಹು ನಿರೀಕ್ಷಿತ ದಢಕ್ ಸಿನಿಮಾವನ್ನು ಶಶಾಂಕ್ ಕೈತಾನ್ ನಿರ್ದೇಶಿಸಿದ್ದು, ನಟಿ ಶ್ರೀದೇವಿಯ ಮೊದಲ ಮಗಳಾದ ಜಾನ್ಹವಿ ಕಪೂರ್ ನಾಯಕಿಯಾಗಿ, ಇಶಾನ್ ಖಟ್ಟರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಪ್ರಾರಂಭದಿಂದಲೇ ನೋಡುಗರ ಎದೆಬಡಿತ ಹಿಡಿದಿಡುವ ಪ್ರೇಮ ಕಥೆ ಹಂದರವುಳ್ಳ ಇದು ಕರಣ್ ಜೋಹಾರ್‌ನ ಧರ್ಮ ಪ್ರೊಡಕ್ಷನ್ ಮತ್ತು ಜೀ ಸ್ಟೂಡಿಯೋದ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದೆ.

ಪಾರ್ವತಿ ಎಂಬ ಪಾತ್ರದ ಮೂಲಕ ತೆರೆದುಕೊಳ್ಳುವ ಜಾಹ್ನವಿ ಶ್ರೀಮಂತ ಕುಟುಂಬದ ಹೆಣ್ಣು. ಈಕೆಯನ್ನು ಪ್ರೀತಿಸುವ ಮಧುಕರ್ ಎಂಬ ಮಧ್ಯಮವರ್ಗದ ಯುವಕ. ಇವರಿಬ್ಬರ ನಡುವಿನ ಪ್ರೇಮವನ್ನು ಎಳೆಯಾಗಿ ಹಿಡಿದುಕೊಂಡಿರುವ ಸಿನಿಮಾದ ಟ್ರೇಲರ್ ಇವರಿಬ್ಬರ ಅಚ್ಚುಕಟ್ಟಾದ ಅಭಿನಯ ಹಾಗೂ ಸಂಗೀತದ ಮೂಲಕ ಹಿಡಿದಿಡುತ್ತದೆ.

ಈ ಸಿನಿಮಾ ಮರಾಠಿ ಭಾಷೆಯಲ್ಲಿ ಮೂಡಿ ಬಂದ ಸೈರಾಟ್ ಸಿನಿಮಾದ ಪ್ರತಿರೂಪವಾಗಿದ್ದು, ಇದು ಇದೇ ಜುಲೈ 20ರಂದು ಬಿಡುಗಡೆಯಾಗಲಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !