ಮೊಟೊ ಮೊಬೈಲ್‌ಗಳ ಬಿಡುಗಡೆ

7

ಮೊಟೊ ಮೊಬೈಲ್‌ಗಳ ಬಿಡುಗಡೆ

Published:
Updated:
ಮೊಟೊ ಮೊಬೈಲ್‌ಗಳ ಬಿಡುಗಡೆ

ಮೊಬೈಲ್ ಕಂಪನಿಯಾದ ಮೊಟೊರೊಲಾ ಸಾಮಾನ್ಯ ಜನರ ಕೈಗೆಟುಕುವ ದರದಲ್ಲಿ ‘ಮೊಟೊ ಜಿ’ ಶ್ರೇಣಿಯ ‘ಮೊಟೊ ಜಿ 6’ ಹಾಗೂ ‘ಮೊಟೊ ಜಿ 6 ಪ್ಲೇ’ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗುಣಮಟ್ಟದ ಈ ಮೊಬೈಲ್‌ಗಳು ಆಕರ್ಷಕವಾಗಿದ್ದು, ಇವು ಕಡಿಮೆ ಬೆಲೆಗಳಲ್ಲಿ ಲಭ್ಯ. ಕ್ವಾಲ್‍ಕಾಂ ಸ್ನಾಪ್‍ಡ್ರ್ಯಾಗನ್ ಪ್ರೊಸೆಸರ್‌ಗಳು ಕಾರ್ಯನಿರ್ವಹಣೆಯ ವೇಗವನ್ನು ವೃದ್ಧಿಸುತ್ತವೆ. ಉತ್ತಮವಾದ ಡಿಸ್‌ಪ್ಲೇ, ಗ್ಲಾಸ್ ಡಿಸೈನ್ ಉತ್ತಮವಾಗಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

*

ಮೊಟೊ ಜಿ 6 ವಿಶೇಷ

14.5 ಸೆಂ.ಮೀ(5.7)ವುಳ್ಳ ಮೊಟೊ ಜಿ6 ಮೊಬೈಲ್ ಫುಲ್ ಎಚ್‍ಡಿ ಮತ್ತು ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ, ಹೊಂದಿದೆ. ಗಮನ ಸೆಳೆಯುವ 3ಡಿ ಗ್ಲಾಸ್ ಬ್ಯಾಕ್ ಆಕರ್ಷಕ ಆಕಾರ ನೀಡುತ್ತದೆ ಮತ್ತು ಇತರೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ. ಸುಧಾರಿತ ಇಮೇಜಿಂಗ್ ಸಾಫ್ಟ್‌ವೇರ್ ಹೊಂದಿರುವ ಈ ಮೊಬೈಲ್‌ 12ಎಂಪಿ ಹಾಗೂ 5ಎಂಪಿ ಸಾಮರ್ಥ್ಯದ ಕ್ಯಾಮೆರಾಗಳಿವೆ. ಫಿಂಗರ್‌ಪ್ರಿಂಟ್ ತಂತ್ರಾಂಶವನ್ನೂ ಒಳಗೊಂಡಿವೆ.

3,000 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು, ಟರ್ಬೊ ಪವರ್ ಚಾರ್ಜರ್ ಮೂಲಕ ತ್ವರಿತವಾಗಿ ಈ ಮೊಬೈಲ್ ಅನ್ನು ಚಾರ್ಜ್‌ ಮಾಡಬಹುದು. ಫೇಸ್‌ ಅನ್‌ಲಾಕ್ ತಂತ್ರಾಂಶವಿದೆ. ವಿವಿಧ ಬಣ್ಣಗಳಲ್ಲಿ ಹಾಗೂ 3ಜಿಬಿ ರ‍್ಯಾಮ್, 32ಜಿಬಿ ಸ್ಟೋರೇಜ್ ಮತ್ತು 4ಜಿಬಿ ರ‍್ಯಾಮ್ 64ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಅಮೆಜಾನ್ ಆನ್‌ಲೈನ್ ಮಾರುಕಟ್ಟೆ ಹಾಗೂ ಮೊಟೊ ಹಬ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ. ಬೆಲೆ ₹13,999.

*

ಮೊಟೊ ಜಿ6 ಪ್ಲೇ ವಿಶೇಷ

4,000 ಎಂಎಎಚ್ ಬ್ಯಾಟರಿ ಸಾಮರ್ಥ್ಯವುಳ್ಳ ಈ ಮೊಬೈಲ್‌ಗೆ ಒಮ್ಮೆ ಚಾರ್ಜಿಂಗ್ ಮಾಡಿ 36 ಗಂಟೆಗಳ ವರೆಗೆ ಬಳಸಬಹುದು. 1.4 ಜಿಎಚ್ ಕೋರ್ ಪ್ರೊಸೆಸರ್ ಇದ್ದು, ಮೊಬೈಲ್‌ ಅನ್ನು ವೇಗವಾಗಿ ಕಾರ್ಯನಿರ್ವಹಿಸುವಂತೆ ಇವು ಮಾಡುತ್ತವೆ.

14.5 ಸೆಂ.ಮೀ.(5.7") ಮ್ಯಾಕ್ಸ್ ವಿಷನ್ ಡಿಸ್‌ ಪ್ಲೇ ಇರುವ ಈ ಮೊಬೈಲ್ ಅನ್ನು ಸುಲಭವಾಗಿ ಹಿಡಿದುಕೊಳ್ಳಬಹುದು. 13ಎಂಪಿ ಕ್ಯಾಮೆರಾ ಇದ್ದು, ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿಯಾಗಿವೆ. ಫೇಸ್ ಡಿಟೆಕ್ಷನ್ ಹಾಗೂ ಸ್ವಯಂಚಾಲಿತವಾಗಿ ಚಿತ್ರಗಳನ್ನು ಸೆರೆಹಿಡಿಯಬಲ್ಲದು. 8 ಎಂಪಿ ಫ್ರಂಟ್ ಕ್ಯಾಮೆರಾ ಇದ್ದು, ಸೆಲ್ಫೀ ಕ್ರೇಜ್‌ನವರಿಗೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಫ್ರಂಟ್ ಫ್ಲ್ಯಾಶ್ ಲೈಟ್ ವ್ಯವಸ್ಥೆಯೂ ಇದೆ. ಫ್ಲಿಪ್‌ಕಾರ್ಟ್‌ ಆನ್‌ಲೈನ್ ಮಾರುಕಟ್ಟೆ ಹಾಗೂ ಮೊಟೊ ಹಬ್‌ ಸ್ಟೋರ್‌ಗಳಲ್ಲಿ ಇವು ಖರೀದಿಗೆ ಲಭ್ಯ. ಬೆಲೆ ₹11,999.

*

ಓರಿಫ್ಲೇಮ್‌ನ ಹೊಸ ಉತ್ಪನ್ನ

ಓರಿಫ್ಲೇಮ್ ಕಂಪನಿಯು ಚರ್ಮದ ಕಾಂತಿ ಹೆಚ್ಚಿಸುವಂತಹ ಹೊಸ ‘ಆಪ್ಟಿಮಲ್ಸ್ ಹೈಡ್ರಾ ರೇಂಜ್‌’ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸ್ವೀಡನ್ ಗಿಡಮೂಲಿಕೆಗಳಿಂದ ಈ ಉತ್ಪನ್ನವನ್ನು ತಯಾರಿಸಿದ್ದು, ಇದು ಚರ್ಮ ಒಣಗುವುದನ್ನು ತಡೆಗಟ್ಟಿ, ರೇಡಿಯನ್ಸ್‌ಗಳನ್ನು ಹೆಚ್ಚಿಸುತ್ತದೆ. ಚರ್ಮವನ್ನು ಮೃದುಗೊಳಿಸುವುದರ ಜೊತೆಗೆ ಬಣ್ಣವನ್ನು ಬದಲಿಸುತ್ತದೆ. ನೀರಿನ ಪ್ರಮಾಣವನ್ನು ನಿರ್ವಹಿಸುವ ಈ ಉತ್ಪನ್ನವು ಮುಖವನ್ನು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ. ತ್ವಚೆಯನ್ನು ಆರೋಗ್ಯ ಪೂರ್ಣವಾಗಿ ಇಡಲು ಇದು ಹೆಚ್ಚು ಸಹಕಾರಿ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಆಪ್ಟಿಮಲ್ ಹೈಡ್ರಾ ರೇಂಜ್ ಚರ್ಮ ಶುದ್ಧಗೊಳಿಸುವ ಗುಣ ಹೊಂದಿದೆ. ಜತೆಗೆ ರಿಫ್ರೆಶಿಂಗ್ ಟೋನರ್, ಐ ಕ್ರೀಂ ಡೇ ಕ್ರೀಂ, ನೈಟ್ ಕ್ರೀಂಗಳನ್ನು ಹೊಂದಿದೆ. ಇವು ನಿಮ್ಮ ಚರ್ಮದ ಕಾಂತಿಉಯನ್ನು ಹೆಚ್ಚಿಸುವುದರ ಜತೆಗೆ ಹಲವು ಅನುಕೂಲಗಳನ್ನು ಒದಗಿಸುತ್ತದೆ. ಮೂರು ಮಾದರಿಯಲ್ಲಿ ಈ ಉತ್ಪನ್ನಗಳು ಲಭ್ಯವಿದ್ದು, ಆಪ್ಟಿಮಲ್ಸ್ ಹೈಡ್ರಾ ರೇಡಿಯನ್ಸ್‌ ಹೈಡ್ರೇಟಿಂಗ್‌ ಡೇ ಕ್ರೀಮ್‌ನ ಬೆಲೆ ₹427, ಬಿಲಿವಿಂಗ್‌ ಐ ಕ್ರೀಮ್‌ನ ಬೆಲೆ ₹365 ಹಾಗೂ ಹೈಡ್ರಾ ಕ್ಲೀನ್‌ಸಿಂಗ್‌ ಜೆಲ್‌ನ ಬೆಲೆ ₹ 370 ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

*

ಹೊಸ ಉಡುಗೆ

ಉಡುಪು ತಯಾರಿಕಾ ಸಂಸ್ಥೆಯಾದ ‘ಮ್ಯಾಕ್ಸಿ’ಯೂ ಎಲ್ಲ ಋತುಗಳಿಗೂ ಒಗ್ಗುವಂತಹ ಹೊಸ ಶೈಲಿಯ ಧಿರಿಸುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಆಕರ್ಷಕ ವಿನ್ಯಾಸ ಮತ್ತು ಬಗೆ ಬಗೆಯ ಬಣ್ಣಗಳಿಂದ ಕೂಡಿರುವ ಈ ಬಟ್ಟೆಗಳು ಗ್ರಾಹಕರ ಅಭಿರುಚಿಗೆ ತಕ್ಕಂತಿವೆ. ವಾತಾವರಣಕ್ಕೆ ತಕ್ಕಂತೆ ಎಲ್ಲ ಕಾಲಕ್ಕೂ ಇವುಗಳನ್ನು ಧರಿಸಬಹುದು. ಉತ್ತಮ ಸ್ಯಾಂಡಲ್ಸ್ ಮತ್ತು ಕೆಡ್ಸ್ ಜೊತೆಗೆ ಈ ಬಟ್ಟೆಗಳನ್ನು ಧರಿಸಿದರೆ ಹೆಚ್ಚು ಆಕರ್ಷಕವಾಗಿರಲಿವೆ. ಸ್ಟೈಲಿಷ್ ಲುಕ್‌ ನೀಡಲಿವೆ. ಮ್ಯಾಕ್ಸ್‌ ಡ್ರೆಸ್‌ಗಳು ವೂನಿಕ್ ಮಳಿಗೆಯಲ್ಲಿ ಖರೀದಿಗೆ ಲಭ್ಯ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry