ನೀರವ್‌ ಮೋದಿಗೆ ರೆಡ್‌ ಕಾರ್ನರ್‌ ನೋಟಿಸ್‌ ನೀಡುವಂತೆ ಇಂಟರ್‌ಪೋಲ್‌ಗೆ ಕೋರಿದ ಸಿಬಿಐ

7

ನೀರವ್‌ ಮೋದಿಗೆ ರೆಡ್‌ ಕಾರ್ನರ್‌ ನೋಟಿಸ್‌ ನೀಡುವಂತೆ ಇಂಟರ್‌ಪೋಲ್‌ಗೆ ಕೋರಿದ ಸಿಬಿಐ

Published:
Updated:
ನೀರವ್‌ ಮೋದಿಗೆ ರೆಡ್‌ ಕಾರ್ನರ್‌ ನೋಟಿಸ್‌ ನೀಡುವಂತೆ ಇಂಟರ್‌ಪೋಲ್‌ಗೆ ಕೋರಿದ ಸಿಬಿಐ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡಬೇಕು ಎಂದು ಸಿಬಿಐ ಇಂಟರ್‌ಪೋಲ್‌ಗೆ ಕೋರಿದೆ.

ಈ ಸಂಬಂಧ ಸೋಮವಾರ ಇಂಟರ್‌ಪೋಲ್‌ಗೆ ಪತ್ರ ಬರೆದಿರುವ ಸಿಬಿಐ, ರೆಡ್‌ ಕಾರ್ನರ್‌ ನೋಟಿಸ್ ನೀಡಿದರೆ ಅಂತರರಾಷ್ಟ್ರೀಯ ಪೊಲೀಸ್‌ ಸಂಸ್ಥೆಯ ಮೂಲಕ ನೀರವ್‌ ಮೋದಿಯನ್ನು ಬಂಧಿಸಬಹುದು. ಇಲ್ಲದಿದ್ದರೆ, ನೀವರ್‌ ಮೋದಿ ಪಲಾಯನ ಮಾಡಬಹುದು ಎಂದು ಉಲ್ಲೇಖೀಸಿದೆ.

ಪಿಎನ್‌ಬಿಗೆ ₹13 ಸಾವಿರ ಕೋಟಿ ವಂಚಿಸಿ ಪರಾರಿಯಾಗಿರುವ ನೀರವ್‌ ಮೋದಿ ವಿರುದ್ಧ ಸಿಬಿಐ ಅಧಿಕಾರಿಗಳು ಮೇ 15ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯ ಉದ್ಯಮಗಳ ಸಿಇಒಗಳೊಂದಿಗಿರುವ ಫೋಟೊ ಮೂಲಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಕೊನೆ.

* ಇದನ್ನೂ ಓದಿ...

ನೀರವ್‌ ವಿರುದ್ಧ ಸಿಬಿಐ ಆರೋಪಪಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry