ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿ: ಡೇಲ್‌ ಸ್ಟೇಯ್ನ್‌ಗೆ ಸ್ಥಾನ

7

ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿ: ಡೇಲ್‌ ಸ್ಟೇಯ್ನ್‌ಗೆ ಸ್ಥಾನ

Published:
Updated:
ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿ: ಡೇಲ್‌ ಸ್ಟೇಯ್ನ್‌ಗೆ ಸ್ಥಾನ

ಕೇಪ್‌ಟೌನ್‌ (ರಾಯಿಟರ್ಸ್‌): ವೇಗದ ಬೌಲರ್‌ ಡೇಲ್‌ ಸ್ಟೇಯ್ನ್‌, ದಕ್ಷಿಣ ಆಫ್ರಿಕಾ ಟೆಸ್ಟ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಮುಂದಿನ ತಿಂಗಳು ಶ್ರೀಲಂಕಾ ಎದುರು ನಡೆಯುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಸೋಮವಾರ ಕ್ರಿಕೆಟ್‌ ದಕ್ಷಿಣ ಆಫ್ರಿಕಾ (ಸಿಎಸ್‌ಎ) ತಂಡವನ್ನು ಬಿಡುಗಡೆ ಮಾಡಿದೆ.

34ರ ಹರೆಯದ ಸ್ಟೇಯ್ನ್‌, ಈ ವರ್ಷದ ಜನವರಿಯಲ್ಲಿ ನಡೆದಿದ್ದ ಭಾರತದ ಎದುರಿನ ಟೆಸ್ಟ್‌ ಸರಣಿಯ ವೇಳೆ ಭುಜದ ನೋವಿಗೆ ಒಳಗಾಗಿದ್ದರು. ಇದರಿಂದ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಟೆಸ್ಟ್‌ ಬೌಲರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕಗಿಸೊ ರಬಾಡ ಅವರೂ ತಂಡಕ್ಕೆ ಮರಳಿದ್ದಾರೆ. ಫಾಫ್‌ ಡು ಪ್ಲೆಸಿ, ತಂಡದ ಸಾರಥ್ಯ ವಹಿಸಲಿದ್ದಾರೆ.

ಸರಣಿಯ ಮೊದಲ ಪಂದ್ಯ ಜುಲೈ 12ರಿಂದ 16ರವರೆಗೆ ಗಾಲ್‌ನಲ್ಲಿ ಜರುಗಲಿದೆ. ಎರಡನೇ ಪಂದ್ಯ ಕೊಲಂಬೊದಲ್ಲಿ ನಿಗದಿಯಾಗಿದೆ.

ತಂಡ ಇಂತಿದೆ: ಫಾಫ್‌ ಡು ಪ್ಲೆಸಿ (ನಾಯಕ), ಹಾಶೀಮ್‌ ಆಮ್ಲಾ, ತೆಂಬಾ ಬವುಮಾ, ಕ್ವಿಂಟನ್‌ ಡಿ ಕಾಕ್‌, ತೆವುನಿಶ್‌ ಡಿ ಬ್ರ್ಯೂನ್‌, ಡೀನ್‌ ಎಲ್ಗರ್‌, ಹೆನ್ರಿಕ್‌ ಕ್ಲಾಸೆನ್‌, ಕೇಶವ್‌ ಮಹಾರಾಜ್‌, ಏಡನ್‌ ಮಾರ್ಕರಮ್‌, ಲುಂಗಿಸಾನಿ ಗಿಡಿ, ವೆರ್ನಾನ್‌ ಫಿಲಾಂಡರ್‌, ಕಗಿಸೊ ರಬಾಡ, ತಬ್ರೈಜ್‌ ಶಂಸಿ, ಡೇಲ್‌ ಸ್ಟೇಯ್ನ್‌ ಮತ್ತು ಶಾನ್‌ ವೊನ್‌ ಬರ್ಗ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry