ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘನೆ: ಎನಕ್ ಇಕೋಪ್ ಅಮಾನತು

7

ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘನೆ: ಎನಕ್ ಇಕೋಪ್ ಅಮಾನತು

Published:
Updated:

ದುಬೈ: ಸತತವಾಗಿ ಭ್ರಷ್ಟಾಚಾರ ತಡೆ ನಿಯಮವನ್ನು ಉಲ್ಲಂಘಿಸಿದ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ನಿರ್ದೇಶಕ ಎನಕ್ ಇಕೋಪ್ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಮಾನತು ಮಾಡಿದೆ. ಅವರು ಮೂರು ಬಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹರಾರೆ ಮಟ್ರೊಪಾಲಿಟನ್‌ ಕ್ರಿಕೆಟ್ ಸಂಸ್ಥೆಯ (ಎಚ್‌ಎಂಸಿಎ) ಅಧ್ಯಕ್ಷರೂ ಆಗಿರುವ ಇಕೋಪ್‌ ಅವರು ಸೋಮವಾರದಿಂದ 14 ದಿನಗಳ ಒಳಗೆ ಉತ್ತರಿಸಬೇಕು ಎಂದು ಐಸಿಸಿ ತಾಕೀತು ಮಾಡಿದೆ.

ಭ್ರಷ್ಟಾಚಾರ ತಡೆ ಘಟಕದ ನೋಟಿಸ್‌ಗೆ ಸ್ಪಷ್ಟನೆ ನೀಡಲು ವಿಫಲರಾ ದದ್ದಕ್ಕೆ ನಿಯಮ 2.4.6ರ ಅಡಿಯಲ್ಲಿ, ಘಟಕ ಸೂಚಿಸಿದ ತನಿಖೆ ಕೈಗೊಳ್ಳುವಲ್ಲಿ ತಡ ಮಾಡಿದ್ದಕ್ಕೆ ಮತ್ತು ಘಟಕದ ತನಿಖೆಗೆ ಅಡ್ಡಿಪಡಿಸಿದ್ದಕ್ಕೆ ನಿಯಮ 2.4.7ರ ಅಡಿಯಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ಭ್ರಷ್ಟಾಚಾರದಲ್ಲಿ ಭಾಗಿಯಾದದ್ದು ಸಾಬೀತಾದ ಕಾರಣ ಎಚ್‌ಎಂಸಿಎ ಮಾರುಕಟ್ಟೆ ವಿಭಾಗದ ನಿರ್ದೇಶಕ ರಾಜನ್ ನಾಯರ್‌ ಅವರನ್ನು ಕಳೆದ ಮಾರ್ಚ್‌ನಲ್ಲಿ 20 ವರ್ಷಗಳ ಅವಧಿಗೆ ಅಮಾನತು ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry