6

‘ತಂಡದ ಸಾಧನೆ ಮೇಲೆ ನನ್ನ ಭವಿಷ್ಯ ನಿರ್ಧಾರ’

Published:
Updated:
‘ತಂಡದ ಸಾಧನೆ ಮೇಲೆ ನನ್ನ ಭವಿಷ್ಯ ನಿರ್ಧಾರ’

ಬ್ರೊನ್ನಿಟ್ಸಿ, ರಷ್ಯಾ (ಎಎಫ್‌ಪಿ): ‘ಈ ಬಾರಿಯ ವಿಶ್ವಕಪ್‌ನಲ್ಲಿ ನಮ್ಮ ತಂಡ ತೋರುವ ಸಾಧನೆಯ ಮೇಲೆ ನನ್ನ ವೃತ್ತಿ ಬದುಕಿನ ಭವಿಷ್ಯ ನಿಂತಿದೆ’ ಎಂದು ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರ ಲಯೊನೆಲ್‌ ಮೆಸ್ಸಿ ಹೇಳಿದ್ದಾರೆ.

‘ನನ್ನ ಪಾಲಿಗೆ ಈ ವಿಶ್ವಕಪ್‌ ಒಂದು ಅಗ್ನಿಪರೀಕ್ಷೆ. ಟೂರ್ನಿಯಲ್ಲಿ ತಂಡ ಯಾವ ಹಂತಕ್ಕೆ ಹೋಗಲಿದೆ ಎಂಬುದು ಮುಖ್ಯ. ಅದರ ಆಧಾರದಲ್ಲಿ ನಾನು ಮುಂದೆ ಆಡಬೇಕು ಅಥವಾ ಬೇಡವೋ ಎಂಬುದನ್ನು ನಿರ್ಧರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘2014ರ ವಿಶ್ವಕಪ್‌, 2015 ಹಾಗೂ 2016ರ ಕೊಪಾ ಅಮೆರಿಕ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ನಾವು ಸೋತಿದ್ದೇವೆ. ಪ್ರಮುಖ ಟೂರ್ನಿಗಳ ಅಂತಿಮ ಘಟ್ಟಕ್ಕೆ ತಲುಪಿ ಮುಗ್ಗರಿಸುವ ತಂಡ ಎಂಬ ಹಣೆಪಟ್ಟಿ ನಮ್ಮ ತಂಡಕ್ಕಿದೆ. ಆ ಹಣೆಪಟ್ಟಿಯನ್ನು ತೆಗೆದು ಹಾಕಲು ಈಗ ಮತ್ತೊಂದು ಅವಕಾಶ ಸಿಕ್ಕಿದೆ’ ಎಂದು ಅವರು ತಿಳಿಸಿದ್ದಾರೆ.

‘ವಿಶ್ವವೇ ಎದುರು ನೋಡುತ್ತಿರುವ ಈ ಟೂರ್ನಿಯಲ್ಲಿ ಸ್ಪೇನ್‌, ಬ್ರೆಜಿಲ್‌, ಜರ್ಮನಿ, ಫ್ರಾನ್ಸ್‌ ಹಾಗೂ ಬೆಲ್ಜಿಯಂ ತಂಡಗಳು ಬಲಿಷ್ಠವಾಗಿವೆ. ಕಪ್‌ ಎತ್ತಿಹಿಡಿಯುವ ಎಲ್ಲ ಸಾಮರ್ಥ್ಯ ಆ ತಂಡಗಳಿಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಡಿ ಗುಂಪಿನಲ್ಲಿರುವ ಅರ್ಜೆಂಟೀನಾ ತಂಡವು ಜೂನ್‌ 16ರಂದು ತನ್ನ ಮೊದಲ ಪಂದ್ಯದಲ್ಲಿ ಐಸ್‌ಲ್ಯಾಂಡ್‌ ಅನ್ನು ಎದುರಿಸಲಿದೆ. ಕ್ರೊವೇಷ್ಯಾ ಹಾಗೂ ನೈಜೀರಿಯಾ ಈ ಗುಂಪಿನಲ್ಲಿರುವ ಇತರ ತಂಡಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry