ಪತ್ನಿಯ ಮೂಗು ಮುರಿದ ಪತಿಗೆ ದಂಡ!

7

ಪತ್ನಿಯ ಮೂಗು ಮುರಿದ ಪತಿಗೆ ದಂಡ!

Published:
Updated:

ಸಿಂಗಪುರ: ಪತ್ನಿಯ ಮುಖಕ್ಕೆ ಹಲವು ಬಾರಿ ಗುದ್ದಿ, ಅವಳ ಮೂಗಿನ ಮೂಳೆ ಮುರಿತಕ್ಕೆ ಕಾರಣನಾದ ಪತಿಗೆ ಸಿಂಗಪುರದ ನ್ಯಾಯಾಲಯ ಎರಡು ಸಾವಿರ ಡಾಲರ್‌ ದಂಡ(₹1.34 ಲಕ್ಷ) ವಿಧಿಸಿದೆ.

48 ವರ್ಷದ ಒಂಗ್‌ ಕಿಮ್‌ ಹೌಟ್ ಪತ್ನಿಯ ಮೂಗು ಮುರಿದವ ಎಂದು 'ದಿ ಸ್ಟೇಟ್ಸ್‌ ಟೈಮ್ಸ್‌’ ವರದಿ ಮಾಡಿದೆ.

ಕಳೆದ ಮಾರ್ಚ್‌ 17ರಂದು ಒಂಗ್‌ ಮತ್ತು ಅವನ 41 ವರ್ಷದ ಪತ್ನಿ ಜಗಳವಾಡಿದ್ದಾರೆ. ಈ ಕಲಹ ವಿಕೋಪಕ್ಕೆ ತಿರುಗಿದಾಗ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ.

ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ದಂಪತಿಯ ಒಂದು ವರ್ಷದ ಮಗನನ್ನು ಒಂಗ್‌ನ ತಂಗಿಯ ಬಳಿ ಬಿಡಲಾಗಿದೆ.

‘ಪತ್ನಿ ಒಂಗ್‌ನನ್ನು ಕ್ಷಮಿಸಿದ್ದಾಳೆ. ದಂಪತಿ ಒಂದಾಗಲಿದ್ದು, ಅವರ ಮಗ ಶೀಘ್ರದಲ್ಲಿಯೇ ಪೋಷಕರ ಮಡಿಲು ಸೇರಲಿದ್ದಾನೆ’ ಎಂದು ಒಂಗ್‌ ಪರ ವಕೀಲ ಲ್ಯೂಕ್‌ ಲೀ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.

ಹಲ್ಲೆ ಮಾಡಿದ ಕಾರಣಕ್ಕೆ ಜಿಲ್ಲಾ ನ್ಯಾಯಾಧೀಶ ಲ್ಯೂಕ್‌ ತಾನ್‌, ಒಂಗ್‌ಗೆ ದಂಡ ವಿಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry