ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಉದ್ಯೋಗ: ಮುಂಚೂಣಿಯಲ್ಲಿ ಬೆಂಗಳೂರು

Last Updated 11 ಜೂನ್ 2018, 20:24 IST
ಅಕ್ಷರ ಗಾತ್ರ

ನವದೆಹಲಿ: ಐ.ಟಿ, ಸ್ಟಾರ್ಟ್‌ಅಪ್‌ಗಳ ರಾಜಧಾನಿ ಖ್ಯಾತಿಯ ಬೆಂಗಳೂರು ಮಹಾನಗರವು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುವುದರಲ್ಲಿಯೂ ಮುಂಚೂಣಿಯಲ್ಲಿ ಇದೆ.

ಐ.ಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳ ಹುಡುಕಾಟದಲ್ಲಿ ಇರುವವರಿಗೆ ಬೆಂಗಳೂರು ನಗರವು  ದೇಶದ ಇತರ ನಗರಗಳಿಗಿಂತ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತಿದೆ. ದೆಹಲಿ – ಎನ್‌ಸಿಆರ್‌ ಮತ್ತು ಪುಣೆ ನಂತರದ ಸ್ಥಾನದಲ್ಲಿ ಇವೆ.

ಉದ್ಯೋಗ ಅವಕಾಶಗಳ ಮಾಹಿತಿ ನೀಡುವ ‘ಇಂಡೀಡ್‌’ ಅಂತರ್ಜಾಲ ತಾಣ ನೀಡಿರುವ ಮಾಹಿತಿ ಪ್ರಕಾರ, ಐ.ಟಿ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶಗಳ ಪೈಕಿ, ಶೇ 22ರಷ್ಟು ಬೆಂಗಳೂರಿನಲ್ಲಿ ಲಭ್ಯ ಇವೆ.

ಭಾರತದ ‘ಸಿಲಿಕಾನ್‌ ಕಣಿವೆ’ ಖ್ಯಾತಿಯ ನಗರವು, ತಂತ್ರಜ್ಞಾನ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸುತ್ತಿದೆ.  ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯಲ್ಲಿಯೂ ನಗರವು ದೇಶದ ಗಮನ ಸೆಳೆದಿದೆ.

ಉದ್ಯೋಗಗಳ ಅವಕಾಶಗಳನ್ನು ಎದುರು ನೋಡುವ  20 ರಿಂದ 29 ವರ್ಷದ ಒಳಗಿನವರು, ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಹೆಚ್ಚಿನ ಒಲವು ಹೊಂದಿದ್ದಾರೆ.

ಅಷ್ಟೇ ಅಲ್ಲ, 55 ವರ್ಷ ಮೀರಿದವರೂ ಈ ಕ್ಷೇತ್ರದ ಬಗ್ಗೆ ಆಸಕ್ತಿ ತಳೆದಿದ್ದಾರೆ. ಆದರೆ, 40 ರಿಂದ 49 ವರ್ಷದವರು ಮಾತ್ರ ಈ ಕ್ಷೇತ್ರದ ಬಗ್ಗೆ ಕಡಿಮೆ ಒಲವು ತೋರಿದ್ದಾರೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ. ದೇಶದಾದ್ಯಂತ 2015ರ ಮೇ ತಿಂಗಳಿನಿಂದ 2018ರ ಮೇ ತಿಂಗಳ ಅವಧಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ.

**

ಮಾಹಿತಿ ತಂತ್ರಜ್ಞಾನ ಬದಲಾವಣೆಯ ಅಳವಡಿಕೆಯಿಂದ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ.

ಶಶಿ ಕುಮಾರ್‌, ಇಂಡೀಡ್‌ನ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT