ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 197 ಕೋಟಿ ಮರು‍ಪಾವತಿ

Last Updated 11 ಜೂನ್ 2018, 19:23 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ರಾಜ್ಯದ ವರ್ತಕರಿಗೆ ಮರು ಪಾವತಿಸಬೇಕಾದ ಜಿಎಸ್‌ಟಿ ಪ್ರಕರಣಗಳಲ್ಲಿನ ಶೇ 30ರಷ್ಟನ್ನು 10 ದಿನಗಳಲ್ಲಿ ಪರಿಹರಿಸಲಾಗಿದೆ.

ವರ್ತಕರಿಗೆ ಬಾಕಿ ಪಾವತಿಸಬೇಕಾದ ಪ್ರಕರಣಗಳ ಇತ್ಯರ್ಥಕ್ಕೆ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಡಿ ರಾಜ್ಯದಲ್ಲಿ ₹ 197 ಕೋಟಿಗಳನ್ನು ಮರು ಪಾವತಿಸಲಾಗಿದೆ.

ಜಿಎಸ್‌ಟಿ ಜಾರಿಗೆ ಬಂದ ದಿನದಿಂದ ಈ ವರ್ಷದ ಏಪ್ರಿಲ್‌ ಅಂತ್ಯದವರೆಗೆ ಜಿಎಸ್‌ಟಿ ಮರುಪಾವತಿ ಕೋರಿ ‘ಸಿಬಿಐಸಿ’ಗೆ 1,289 ಮನವಿಗಳನ್ನು ಸಲ್ಲಿಸಲಾಗಿತ್ತು. ಇವುಗಳ ಪೈಕಿ 1,242 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 47 ಅರ್ಜಿಗಳನ್ನು (ಶೇ 3.6) ಮಾತ್ರ ಇನ್ನೂ ವಿಲೇವಾರಿ ಮಾಡಬೇಕಾಗಿದೆ. ರಿಟರ್ನ್‌ ಸಲ್ಲಿಕೆಯಲ್ಲಿನ ದೋಷಗಳಿಂದ ಅವುಗಳನ್ನು ಇತ್ಯರ್ಥಪಡಿಸಲಾಗಿಲ್ಲ.

‘ರಾಜ್ಯದಲ್ಲಿ ₹ 674 ಕೋಟಿಗಳ ಮರುಪಾವತಿಗೆ ಬೇಡಿಕೆ ವ್ಯಕ್ತವಾಗಿತ್ತು. ಇದರಲ್ಲಿ ಇಲ್ಲಿಯವರೆಗೆ ₹ 650 ಕೋಟಿಯನ್ನು ಜಿಎಸ್‌ಟಿ ತೆರಿಗೆದಾರರಿಗೆ ಮರಳಿಸಲಾಗಿದೆ. ಒಟ್ಟಾರೆ ಶೇ 96.4ರಷ್ಟು ಅರ್ಜಿಗಳನ್ನು ಇತ್ಯರ್ಥಪಡಿಸಿದಂತಾಗಿದೆ’ ಎಂದು ಕೇಂದ್ರೀಯ ತೆರಿಗೆಯ ಮುಖ್ಯ ಆಯುಕ್ತ ಎ. ಕೆ. ಜ್ಯೋತಿಷಿ ಅವರು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದಿಂದ ಪ್ರತಿ ತಿಂಗಳೂ ₹ 6 ಸಾವಿರ ಕೋಟಿಗಳಷ್ಟು ಜಿಎಸ್‌ಟಿ ಸಂಗ್ರಹವಾಗುತ್ತಿದೆ. ತೈಲೋತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆ ರೂಪದಲ್ಲಿನ ₹ 1 ಸಾವಿರ ಕೋಟಿ ಇದರಲ್ಲಿ ಸೇರಿಲ್ಲ’ ಎಂದರು.

ಇದಲ್ಲದೆ, ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ವ್ಯಾಪ್ತಿಗೆ ಬರುವ ₹ 274 ಕೋಟಿಗಳ ಬೇಡಿಕೆಯನ್ನೂ ಇತ್ಯರ್ಥಪಡಿಸಲಾಗಿದೆ. ರಾಜ್ಯ ತೆರಿಗೆ ಪ್ರಾಧಿಕಾರಗಳು ಈ ಪ್ರಕರಣಗಳನ್ನು ‘ಸಿಬಿಐಸಿ’ಗೆ ವರ್ಗಾಯಿಸಿದ್ದವು. ಇದೂ ಸೇರಿದಂತೆ ವರ್ತಕರಿಗೆ ಮರಳಿಸಿದ ಮೊತ್ತವು ₹ 924 ಕೋಟಿಗಳಷ್ಟಾಗಿದೆ. ದೇಶದಾದ್ಯಂತ ಒಟ್ಟು ₹ 5 ಸಾವಿರ ಕೋಟಿಗಳನ್ನು ವರ್ತಕರಿಗೆ ಮರಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT