ವಿಷನ್‌ ಗ್ರೂಪ್‌ ರಚನೆ ಆದೇಶ ಹಿಂದಕ್ಕೆ

7

ವಿಷನ್‌ ಗ್ರೂಪ್‌ ರಚನೆ ಆದೇಶ ಹಿಂದಕ್ಕೆ

Published:
Updated:

ಬೆಂಗಳೂರು: ಬೆಂಗಳೂರು ನಗರದಲ್ಲಿ ಮೂಲಸೌಕರ್ಯ ಒದಗಿಸುವ ಸಲುವಾಗಿ ‘ಬೆಂಗಳೂರು ನೀಲನಕ್ಷೆ ಕ್ರಿಯಾ ತಂಡ (ವಿಷನ್‌ ಗ್ರೂಪ್‌)’ ರಚಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ.

ತಂಡದ ರಚನೆ ಪ್ರಶ್ನಿಸಿ ಸಂಸದ ರಾಜೀವ್ ಚಂದ್ರಶೇಖರ್ ಮತ್ತು ‘ನಮ್ಮ ಬೆಂಗಳೂರು ಫೌಂಡೇಷನ್’ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ತಂಡವನ್ನು ಮುಂದುವರಿಸುವ ಅಗತ್ಯತೆ ಬಗ್ಗೆ ಹೈಕೋರ್ಟ್ ಪ್ರಶ್ನಿಸಿತ್ತು. ಇದರಿಂದ ರಾಜ್ಯ ಸರ್ಕಾರವು ರಚನೆ ಆದೇಶ

ವನ್ನು ಜೂನ್ 8ರಂದೇ ಹಿಂಪಡೆದುಕೊಂಡಿದೆ.

ಅದರ ಆದೇಶ ಪ್ರತಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠಕ್ಕೆ, ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಸೋಮವಾರ ಸಲ್ಲಿಸಿದರು.

ಅದನ್ನು ದಾಖಲಿಸಿಕೊಂಡ ಹೈಕೋರ್ಟ್, ‘ಬೆಂಗಳೂರು ವಿಷನ್ ಗ್ರೂಪ್’ ಅನ್ನು ರಚಿಸಿದ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಹೀಗಾಗಿ, ಬೆಂಗಳೂರು ಮೆಟ್ರೋ ಪಾಲಿಟನ್ ಸಮಿತಿ ಮುಂದುವರಿಯಲಿದೆ. ಇದರಿಂದ ಬೆಂಗಳೂರು ವಿಷನ್ ಗ್ರೂಪ್‌ಗೆ ಸಂಬಂಧಿಸಿದ ಮತ್ತು ಅದಕ್ಕೆ ಹೊರಿಸಲಾಗಿದ್ದ ಜವಾಬ್ದಾರಿಗಳ ಕುರಿತ ದಾಖಲೆಗಳನ್ನು ಮೆಟ್ರೋ ಪಾಲಿಟನ್ ಸಮಿತಿಗೆ ವರ್ಗಾವಣೆ ಮಾಡಬೇಕು ಎಂದು ಸರ್ಕಾರಕ್ಕೆ ಸೂಚಿಸಿ ಅರ್ಜಿ

ಇತ್ಯರ್ಥ‍ಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry