ಅಸ್ಸಾಂ ಹತ್ಯೆ ಪ್ರಕರಣ: 19 ಜನರ ಬಂಧನ

7

ಅಸ್ಸಾಂ ಹತ್ಯೆ ಪ್ರಕರಣ: 19 ಜನರ ಬಂಧನ

Published:
Updated:

ಗುವಾಹಟಿ: ಅಸ್ಸಾಂನ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಯುವಕರ ಮೇಲೆ ಗ್ರಾಮಸ್ಥರು ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿಯನ್ನು ಬಂಧಿಸಲಾಗಿದೆ.

ಜೊತೆಗೆ, ಮಕ್ಕಳ ಕಳ್ಳರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವ ಸಂದೇಶಗಳನ್ನು ಪೋಸ್ಟ್‌ ಮಾಡಿದ ಇನ್ನೂ 13 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಅಗರ್ವಾಲ್ ತಿಳಿಸಿದ್ದಾರೆ.

ನಿಸರ್ಗದಲ್ಲಿನ ಶಬ್ದ ವೈವಿಧ್ಯವನ್ನು ದಾಖಲಿಸಿಕೊಳ್ಳಲು ಕಂಗಥಿಲಾಂಗ್ಸೊ ಪ್ರವಾಸಿ ತಾಣಕ್ಕೆ ತೆರಳಿ ಕಾರಿನಲ್ಲಿ ವಾಪಸಾಗುತ್ತಿದ್ದ ನಿಲೋತ್ಪಲ್ ದಾಸ್ ಮತ್ತು ಅಭಿಜಿತ್ ನಾಥ್ ಎಂಬುವವರ ಮೇಲೆ ಮಾರ್ಗ ಮಧ್ಯದ ಹಳ್ಳಿಯಲ್ಲಿ ಈ ದಾಳಿ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry