ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಗುಂಡಿಗಳಿಗೆ ಬೇಸತ್ತ ಜನರು

ಶುಲ್ಕ ನೀಡುವ ರಸ್ತೆಯಲ್ಲಿ ಸವಾರರಿಗೆ ಸಂಕಷ್ಟ
Last Updated 12 ಜೂನ್ 2018, 4:33 IST
ಅಕ್ಷರ ಗಾತ್ರ

ಅಳ್ನಾವರ: ಅಳ್ನಾವರ-ಧಾರವಾಡ ನಡುವಣ ರಾಷ್ಟ್ರೀಯ ಹೆದ್ದಾರಿ ಹಾಳಾಗಿದ್ದು, ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದವರು ಬಿಒಟಿ ಯೋಜನೆಯಡಿ ಈ ಹೆದ್ದಾರಿ ನಿರ್ಮಿಸಿದ್ದು, ಶುಲ್ಕ ನೀಡಿ ಸಂಚರಿಸಬೇಕಾದ ರಸ್ತೆ ಇದಾಗಿದೆ.

ಕುಂಬಾರಕೊಪ್ಪ ರೈಲ್ವೆ ಗೇಟ್‌ ಹಾಗೂ ಧಾರವಾಡ ಸಮೀಪದ ಟೋಲ್‌ಗೇಟ್‌ ಹತ್ತಿರ ರೈಲ್ವೆ ಗೇಟ್‌ ಬಳಿ ರಸ್ತೆ ನಡುವೆ ತಗ್ಗುಗಳು ಬಿದ್ದು ವಾಹನಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ಈ ರಸ್ತೆಯಲ್ಲಿ ಎರಡು ಕಡೆ ರೈಲ್ವೆ ಮೇಲ್ಸೆತುವೆ ಕಾರ್ಯ ಅರ್ಧಕ್ಕೆ ನಿಂತಿದೆ. ಸೇತುವೆ ಮಾರ್ಗದ ಪಕ್ಕ ನಿರ್ಮಿಸಿದ ರಸ್ತೆಯಲ್ಲಿ ದೊಡ್ಡ ತಗ್ಗುಗಳು ಬಿದ್ದಿವೆ. ಅಲ್ಲಿ ಮಳೆ ನೀರು ನಿಂತು ವಾಹನಗಳ ಸವಾರರು ಪರದಾಡುವಂತಾಗಿದೆ.

‘ಕುಂಬಾರಕೊಪ್ಪ ಬಳಿ ಅಳ್ನಾವರ ದಿಕ್ಕಿನಲ್ಲಿ ಸುಮಾರು 300 ಮೀಟರ್‌ ದೂರದ ರಸ್ತೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ತಗ್ಗುಗಳು ಬಿದ್ದಿವೆ. ಬಸ್‌ಗಳು ತಗ್ಗಿನಲ್ಲಿ ಇಳಿದು ಸಾಗುವಾಗ ಪ್ರಯಾಣಿಕರ ಯಾತನೆ ಹೇಳತೀರದು’ ಎಂದು ವಾಹನ ಸವಾರರೊಬ್ಬರು ಅಳಲು ತೋಡಿಕೊಂಡರು.

ಮನವಿ ಸಲ್ಲಿಕೆ: ಈ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಈ ಭಾಗ ಜನರು ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ತಗ್ಗುಗಳನ್ನು ಮುಚ್ಚಿ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು. ಈ ರಸ್ತೆಯ ಅವ್ಯವಸ್ಥೆ ಹಾಗೂ ಸೇತುವೆ ನಿರ್ಮಾಣ ಆಗದಿ
ದ್ದರೂ ಟೋಲ್‌ ಆಕರಣೆ ಮಾಡಲಾಗುತ್ತಿದೆ. ಇದನ್ನೂ ನಿಲ್ಲಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರಸ್ತೆ ಬಹಳ ಕೆಟ್ಟಿದೆ. ಸಂಬಂಧ ಪಟ್ಟವರಿಗೆ ಸಾಕಷ್ಟು ಬಾರಿ ತಿಳಿಸಿದರೂ ಪ್ರಯೋಜನ ಆಗಿಲ್ಲ. ಸಂಸದ ಪ್ರಹ್ಲಾದ್ ಜೋಶಿ ಅವರ ಗಮನಕ್ಕೂ ತರಲಾಗಿದೆ
- ವಿಶ್ವಂಬರ ಬನಸಿ, ಅಧ್ಯಕ್ಷ, ಅರವಟಿಗಿ ಗ್ರಾಮ ಪಂಚಾಯ್ತಿ 

ರಾಜಶೇಖರ ಸುಣಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT