ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೋನಾಟಿಕಲ್: ‘ಉತ್ತುಂಗ’ಕ್ಕೇರಲು ಅವಕಾಶ

ಕೆಬಿಎನ್‌ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಕೋರ್ಸ್‌
Last Updated 12 ಜೂನ್ 2018, 4:55 IST
ಅಕ್ಷರ ಗಾತ್ರ

ಕಲಬುರ್ಗಿ: ನಾಲ್ಕು ವರ್ಷಗಳ ಬಿ.ಇ ಏರೋನಾಟಿಕಲ್ ಎಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡಿದಲ್ಲಿ ವಿದ್ಯಾರ್ಥಿಗಳಿಗೆ ‘ಉತ್ತುಂಗ’ಕ್ಕೇರುವ ಅವಕಾಶವಿದೆ.

ನಗರದ ಖಾಜಾ ಬಂದಾ ನವಾಜ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಕೋರ್ಸ್ ಲಭ್ಯವಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಕೋರ್ಸ್‌ ಆರಂಭಿಸಿದ ಕೀರ್ತಿ ಈ ಕಾಲೇಜಿಗೆ ಸಲ್ಲುತ್ತದೆ. ಏರೋನಾಟಿಕಲ್ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಅವಕಾಶಗಳನ್ನು ಅರಿತ
ಕೆಬಿಎನ್ ಸಂಸ್ಥೆಯು 2006 ರಲ್ಲಿ ಕೋರ್ಸ್ ಆರಂಭಿಸಿದೆ. 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ.

ಪ್ರವೇಶ ಹೇಗೆ?: ಉಳಿದ ಎಂಜಿನಿಯರಿಂಗ್ ಕೋರ್ಸ್‌ಗಳಂತೆ ಏರೋನಾಟಿಕಲ್ ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಲು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಬೇಕು. ದ್ವಿತೀಯ ಪಿಯುಸಿ ಅಥವಾ 12ನೇ ತರಗತಿಯಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕು. ಬಾಹ್ಯಾಕಾಶ ಲೋಕದ ಬಗ್ಗೆ ಕೌತುಕವಿರುವ ವಿದ್ಯಾರ್ಥಿಗಳು ಬಾಹ್ಯಾಕಾಶದ ಎತ್ತರಕ್ಕೆ ಬೆಳೆಯಬಹುದಾಗಿದೆ.

ನಾಲ್ಕು ವರ್ಷದ ಕೋರ್ಸ್‌: ಎಂಟು ಸೆಮಿಸ್ಟರ್‌ ಒಳಗೊಂಡ ನಾಲ್ಕು ವರ್ಷದ ಕೋರ್ಸ್ ಇದಾಗಿದೆ. ವಿಮಾನ, ವಿಮಾನದ ಎಂಜಿನ್, ವಿನ್ಯಾಸ ಮತ್ತು ನಿರ್ವಹಣೆ ಕುರಿತು ಇಲ್ಲಿ ಬೋಧಿಸಲಾಗುತ್ತದೆ. ಉಪಗ್ರಹ, ಬಾಹ್ಯಾಕಾಶ ನೌಕೆ, ರಾಕೆಟ್‌ಗಳ ವಿನ್ಯಾಸ, ವಿಮಾನದ ಕಾರ್ಯಕ್ಷಮತೆ, ನಿಯಂತ್ರಣ, ವಿಂಡ್ ಟನೆಲ್ ಟೆಸ್ಟಿಂಗ್, ವಿಂಡ್‌ ಮಿಲ್‌ಗಳ ಬಗ್ಗೆ ಪ್ರಾಯೋಗಿಕ ಅಧ್ಯಯನ ಮಾಡಬಹುದಾಗಿದೆ.

‘ಏರೋನಾಟಿಕಲ್ ಎಂಜಿನಿಯರಿಂಗ್‌ ಅಧ್ಯಯನದಿಂದ ಸಾಕಷ್ಟು ಉದ್ಯೋಗಾವಕಾಶ ಲಭ್ಯ ಇವೆ. ಸರ್ಕಾರಿ, ಖಾಸಗಿ ವಿಮಾನ ಸಂಸ್ಥೆಗಳು, ಬೋಯಿಂಗ್, ಏರ್‌ಬಸ್‌ಗಳಲ್ಲಿ ಕೆಲಸ ಮಾಡಬಹುದು. ಇಲ್ಲಿ ಓದಿರುವ ವಿದ್ಯಾರ್ಥಿಗಳು ಯುರೋಪ್, ಅರಬ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂ.ಟೆಕ್ ಓದಿ ಬೋಧನೆಯಲ್ಲೂ ತೊಡಗಿಸಿಕೊಳ್ಳಬಹುದಾಗಿದೆ’ ಎಂದು ವಿಭಾಗದ ಮುಖ್ಯಸ್ಥ ಸೈಯದ್ ಕಾಶಿಫ್ ಹುಸೇನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘30 ಸೀಟುಗಳ ಪೈಕಿ ಸರ್ಕಾರಿ ಕೋಟಾ ಸೀಟುಗಳು 16 ರಿಂದ 18 ಮತ್ತು ವ್ಯವಸ್ಥಾಪನ ಮಂಡಳಿ (ಮ್ಯಾನೇಜ್‌ಮೆಂಟ್) ಕೋಟಾದಡಿ 2–14 ಸೀಟುಗಳು ಲಭ್ಯ ಇವೆ. ಬಿಹಾರ, ಉತ್ತರಪ್ರದೇಶ, ದೆಹಲಿಯ ವಿದ್ಯಾರ್ಥಿಗಳು ನಮ್ಮಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಮಾಹಿತಿಗೆ ವಿಭಾಗದ ಮುಖ್ಯಸ್ಥ ಸೈಯದ್ ಕಾಶಿಫ್ ಹುಸೇನ್, ಮೊ.97428 00092, ದೂ.ಸಂ: 08472–224591 ಸಂಪರ್ಕಿಸಬಹುದು.

ಹೆಚ್ಚು ಅವಕಾಶ

ಏರೋನಾಟಿಕಲ್ ಎಂಜಿನಿಯರಿಂಗ್ ಪದವಿ ಓದಿದವರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ವಿಪುಲ ಉದ್ಯೋಗಾವಕಾಶ ಲಭ್ಯ ಇವೆ. ಭಾರತೀಯ ಸೇನೆ, ಎಚ್‌ಎಎಲ್‌, ಎನ್‌ಎಎಲ್, ಐಎಸ್‌ಆರ್‌ಒ, ಡಿಆರ್‌ಡಿಒ, ಜಿಟಿಆರ್‌ಇ, ಖಾಸಗಿ ಕಂಪನಿಗಳಾದ ಕೇಪ್‌ಜೆಮಿನಿ, ಸಫ್ರನ್, ಕ್ವೆಸ್ಟ್‌ಗ್ಲೋಬಲ್, ಇನ್ಫೋಟೆಕ್‌ನಲ್ಲಿ ಆಕರ್ಷ ವೇತನ ಸಿಗುತ್ತದೆ.

ವಿಭಿನ್ನ ಮತ್ತು ಕಠಿಣ

ಏರೋನಾಟಿಕಲ್ ಎಂಜಿನಿಯರಿಂಗ್ ಕೋರ್ಸ್ ಉಳಿದ ಎಲ್ಲ ಎಂಜಿನಿಯರಿಂಗ್ ಕೋರ್ಸ್‌ಗಳಿಗಿಂತ ವಿಭಿನ್ನ, ವಿಶಿಷ್ಟ ಮತ್ತು ಕಠಿಣವಾಗಿದೆ.  ಆಸಕ್ತಿ ಮತ್ತು ಕಠಿಣ ಪರಿಶ್ರಮದಿಂದ ಈ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಬಹುದು. ಜತೆಗೆ ಅತ್ಯಾಕರ್ಷಕ ಸಂಬಳ ಪಡೆಯಬಹುದಾಗಿದೆ. ಇದನ್ನು ‘ಐಷಾರಾಮಿ ಉದ್ಯೋಗ’ ಎಂದೂ ಕರೆಯಲಾಗುತ್ತದೆ. ಈ ಕಾರಣಕ್ಕೆ ಕೋರ್ಸ್‌ಗೆ ಬೇಡಿಕೆ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT