‘ದಿ ಸ್ಟೋರಿ ಆಫ್ ಕಾವೇರಿ’ ಕಿರುಚಿತ್ರಕ್ಕೆ 8 ಪ್ರಶಸ್ತಿ

5

‘ದಿ ಸ್ಟೋರಿ ಆಫ್ ಕಾವೇರಿ’ ಕಿರುಚಿತ್ರಕ್ಕೆ 8 ಪ್ರಶಸ್ತಿ

Published:
Updated:
‘ದಿ ಸ್ಟೋರಿ ಆಫ್ ಕಾವೇರಿ’ ಕಿರುಚಿತ್ರಕ್ಕೆ 8 ಪ್ರಶಸ್ತಿ

ಮೈಸೂರು: ಮುಂಬೈನಲ್ಲಿ ಈಚೆಗೆ ನಡೆದ ‘ಕ್ಯೂರಿಯಸ್ ಕ್ರಿಯೇಟಿವ್ ಅವಾರ್ಡ್ಸ್’ ಸಮಾರಂಭದಲ್ಲಿ ಸೈಕಲ್ ಪ್ಯೂರ್ ಅಗರಬತ್ತಿ ಹಾಗೂ ರೀಫಾರೆಸ್ಟ್ ಇಂಡಿಯಾ ಸಂಸ್ಥೆಗಳು ನಿರ್ದೇಶಿಸಿರುವ 'ದಿ ಸ್ಟೋರಿ ಆಫ್ ಕಾವೇರಿ’ ಕಿರುಚಿತ್ರಕ್ಕೆ ‘7 ಎಲಿಫೆಂಟ್ಸ್ ಹಾಗೂ 1 ಬ್ಲಾಕ್ ಎಲಿಫೆಂಟ್ ಪ್ರಶಸ್ತಿ’ಗಳು ಲಭಿಸಿವೆ.

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪ್ರಶಸ್ತಿ ಪ್ರದಾನ ಮಾಡಿದರು. ಕಾವೇರಿ ನದಿಯ ವಿಷಮ ಸ್ಥಿತಿಯನ್ನು ಉದ್ದೇಶಿಸುವ ಈ ಕಿರುಚಿತ್ರದ ಬರಹಗಾರ ವಿನೋದ್ ಈಶ್ವರ್. ಕಿರುಚಿತ್ರವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 15 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry