7

ನೀರವ್‌ ಮೋದಿ ಪ್ರಕರಣ: ‘ಆ ದಿನ ಬ್ರಿಟಿಷರನ್ನು ತೊಲಗಿಸಿ, ಈ ದಿನ ಬ್ರಿಟನ್‌ನಿಂದ ಭಾರತಿಯರನ್ನು ಎಳೆದು ತನ್ನಿ’

Published:
Updated:
ನೀರವ್‌ ಮೋದಿ ಪ್ರಕರಣ: ‘ಆ ದಿನ ಬ್ರಿಟಿಷರನ್ನು ತೊಲಗಿಸಿ, ಈ ದಿನ ಬ್ರಿಟನ್‌ನಿಂದ ಭಾರತಿಯರನ್ನು ಎಳೆದು ತನ್ನಿ’

ಬೆಂಗಳೂರು: ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ₹11,344 ಕೋಟಿ ವಂಚಿಸಿದ ಆರೋಪ ಹೊತ್ತಿರುವ ವಜ್ರ ವ್ಯಾಪಾರಿ ನೀರವ್ ಮೋದಿ ಇಂಗ್ಲೆಂಡಿಗೆ ಪಲಾಯನ ಮಾಡಿ, ಅಲ್ಲಿ ರಾಜಕೀಯ ಆಶ್ರಯ ಪಡೆಯಲು ಮುಂದಾಗಿದ್ದಾರೆ. ಈ ವಿಷಯವನ್ನು ನಮ್ಮ ದೇಶ ಆಳಿದ್ದ ಬ್ರಿಟಿಷರ ಕಾಲಾವಧಿಗೆ ಸಮೀಕರಿಸಿ, #NiravModi ಹ್ಯಾಷ್‌ಟ್ಯಾಗ್‌ ಬಳಸಿಕೊಂಡು ಟ್ವಿಟ್ಟರಿಗರು ತಮ್ಮ ಆಕ್ರೋಶ, ಹತಾಶೆಗಳನ್ನು ವ್ಯಂಗ್ಯರೂಪದಲ್ಲಿ ಹೊರಹಾಕುತ್ತಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ.

‘ಅವರು ಭಾರತಕ್ಕೆ ಬಂದು ನಮ್ಮನ್ನು ಲೂಟಿ ಮಾಡಿದರು. ಅವರನ್ನು ಹಿಮ್ಮೆಟ್ಟಿಸಲು ನಾವು 200 ವರ್ಷಗಳನ್ನು ತೆಗೆದುಕೊಂಡೆವು. ಈಗ ನಮ್ಮ ಭಾರತೀಯರೇ ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಲೂಟಿಕೋರರಿಗೆ ರಾಜಕೀಯ ಆಶ್ರಯದ ರೂಪದಲ್ಲಿ ಇಂಗ್ಲೆಂಡ್‌ ತಲೆಹಾಕುತ್ತಿದೆ. ವಸಾಹತಿಕರಣ ಎಂಬುದು ಕಾಗದ ಮೇಲೆ ಮಾತ್ರ ನಿಂತಿದೆ. ಆದರೆ, ಇಂಗ್ಲೆಂಡ್‌ ನಮ್ಮನ್ನು ಇಂದಿಗೂ ಆಳುತ್ತಿದೆ’ ಎಂಬ ಟ್ವಿಟ್ ರಘುರಾಂ ರಾಜನ್‌ ಎಂಬ ಟ್ವಿಟರ್‌ ಖಾತೆಯಲ್ಲಿದೆ.

‘ಆ ದಿನಗಳು: ಭಾರತದಿಂದ ಬ್ರಿಟೀಷರನ್ನು ತೊಲಗಿಸಿ.

ಈ ದಿನಗಳು: ಬ್ರಿಟನ್‌ನಿಂದ ಭಾರತೀಯರನ್ನು ಎಳೆದು ತನ್ನಿ’ ಎಂಬ ಘೋಷವಾಕ್ಯವನ್ನು ರಮೇಶ್‌ ಶ್ರೀವತ್ಸ ರೂಪಿಸಿದ್ದಾರೆ.

‘ಸ್ವಾತಂತ್ರ್ಯದ ಮೊದಲು: ನಮ್ಮನ್ನು ಲೂಟಿ ಮಾಡಲು ಜನ ಬ್ರಿಟನ್‌ನಿಂದ ಬರುತ್ತಿದ್ದರು.

ಸ್ವಾತಂತ್ರ್ಯದ ನಂತರ: ನಮ್ಮನ್ನು ಲೂಟಿ ಮಾಡಿದವರು ಬ್ರಿಟನ್‌ಗೆ ಪಲಾಯನ ಮಾಡುತ್ತಿದ್ದಾರೆ’ ಎಂದು ಒಬ್ಬರು ಚಟಾಕಿ ಹಾರಿಸಿದ್ದಾರೆ. 

‘ಬ್ರಿಟಿಷರು ಅಪಾರ ಪ್ರಮಾಣದ ಸಂಪತ್ತನ್ನು ಹೊತ್ತುಕೊಂಡು ಹೋದರು. ಅಳಿದುಳಿದ ಸಂಪತ್ತನ್ನು ಈಗ ಭಾರತೀಯರೇ ಹೊತ್ತು ಬ್ರಿಟನ್‌ಗೆ ಹೋಗುತ್ತಿದ್ದಾರೆ’ ಎಂಬ ಟ್ವಿಟ್‌ ಜೆಟ್‌ ಲಿ ಅಕೌಂಟಿನಲ್ಲಿದೆ. 

‘ವಿಜಯ್‌ ಮಲ್ಯ, ಲಲಿತ್‌ ಮೋದಿ ಮತ್ತು ನೀರವ್‌ ಮೋದಿ ಅವರು ‘ಭಾರತ ಬಿಟ್ಟು ತೊಲಗಿ ಚಳವಳಿ’ಯಂತೆಯೇ ನಡೆದುಕೊಂಡಿದ್ದಾರೆ’ ಎಂದು ಟಿ.ಎಸ್‌.ಸುಧೀರ್‌ ಎಂಬುವವರು ವ್ಯಂಗ್ಯವಾಡಿದ್ದಾರೆ. 

‘ನರೇಂದ್ರ ಮೋದಿ ಮತ್ತು ನೀರವ್‌ ಮೋದಿ ನಡುವಿನ ವ್ಯತ್ಯಾಸ

‘ನರೇಂದ್ರ ಮೋದಿ ತೆರಿಗೆ ಹಣದಲ್ಲಿ 48 ತಿಂಗಳುಗಳಲ್ಲಿ 33 ಬಾರಿ ವಿದೇಶ ಪ್ರವಾಸ ಮಾಡಿದರು. ಜಾಹೀರಾತುಗಳಿಗಾಗಿ ತೆರಿಗೆದಾರರ ಸರಿಸುಮಾರು ₹ 4,000 ಕೋಟಿ ಹಣವನ್ನು ವ್ಯಯಿಸಿದರು.

ನೀರವ್‌ ಮೋದಿ ಒಂದೇ ಬಾರಿಗೆ ₹ 11,000 ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿಕೊಂಡು ವಿದೇಶಕ್ಕೆ ಹಾರಿಹೋದರು. ಅಲ್ಲದೇ ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದರು’ ಎಂದು ಸಧಿಕಾ ತನ್ವಿ ಟೈಪಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !