ಡಿಜಿಟಲ್‌ ಯುಗದಲ್ಲಿ ಗೃಹಸಾಲ

7

ಡಿಜಿಟಲ್‌ ಯುಗದಲ್ಲಿ ಗೃಹಸಾಲ

Published:
Updated:
ಡಿಜಿಟಲ್‌ ಯುಗದಲ್ಲಿ ಗೃಹಸಾಲ

ಇಂಟರ್‌ನೆಟ್‌ ವ್ಯವಸ್ಥೆಯ ಬೇರುಗಳು ನಮ್ಮ ಸಮಾಜದ ಆಳಕ್ಕೆ ಇಳಿಯುತ್ತಿವೆ. ಇದರ ಪರಿಣಾಮವಾಗಿ ಗ್ರಾಮೀಣ ಭಾಗದ ಜನರಿಗೂ ಸ್ಮಾರ್ಟ್‌ ಫೋನ್‌ನಿಂದ ಆರಂಭಿಸಿ ಸ್ಮಾರ್ಟ್‌ ಫ್ರಿಡ್ಜ್‌ವರೆಗೆ ಹೊಸ ಹೊಸ ತಂತ್ರಜ್ಞಾನದ ಸೌಲಭ್ಯಗಳು ಲಭ್ಯವಾಗುತ್ತಿವೆ. ಮನೆಯಲ್ಲಿ ಇದ್ದುಕೊಂಡೇ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಮಯ, ಶ್ರಮಗಳ ಉಳಿತಾಯ ಮಾಡುತ್ತಿದ್ದಾರೆ. ಹೊಸ ತಲೆಮಾರಿನ ಗ್ರಾಹಕರಂತೂ ತಂತ್ರಜ್ಞಾನದ ಸಂಪೂರ್ಣ ಪ್ರಯೋಜನ ಪಡೆಯುತ್ತಿದ್ದಾರೆ.

ತಂತ್ರಜ್ಞಾನದ ಉನ್ನತೀಕರಣದ ಪರಿಣಾಮವಾಗಿ ಗೃಹ ಸಾಲ ನೀಡಿಕೆ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಈಗ ಗ್ರಾಹಕರು ಗೃಹಸಾಲ ಪಡೆಯಲು ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಆರಾಮವಾಗಿ ಕುಳಿತು, ಬೆರಳ ತುದಿಯಿಂದಲೇ ಸಾಲಕ್ಕೆ ಅರ್ಜಿಯನ್ನು ಕಳುಹಿಸಬಹುದು. ಗ್ರಾಮೀಣ ಪ್ರದೇಶಕ್ಕೂ ಇಂಟರ್‌ನೆಟ್‌ ತಲುಪಿರುವುದರಿಂದ ಕಡಿಮೆ ಆರ್ಥಿಕತೆಯ ಜನರೂ ಈ ತಂತ್ರಜ್ಞಾನದ ಲಾಭ ಪಡೆಯುತ್ತಿದ್ದಾರೆ. ಡಿಜಿಟಲೀಕರಣ ಹೇಗೆ ಗೃಹಸಾಲ ವ್ಯವಸ್ಥೆಯನ್ನು ಸರಳೀಕರಿಸಲಿದೆ ಎಂಬ ಮಾಹಿತಿ ಇಲ್ಲಿದೆ.

ಗ್ರಾಹಕರಿಗೆ ಉತ್ತಮ ಸೇವೆ ಹಾಗೂ ಹಿತಾನುಭವ ನೀಡುವ ಸಲುವಾಗಿ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳು ಸಾಲಕ್ಕೆ ಅರ್ಜಿ ಪಡೆಯುವುದು, ದಾಖಲೆಗಳ ಪರಿಶೀಲನೆ ಹೀಗೆ ಬಹುತೇಕ ಎಲ್ಲವನ್ನೂ ಡಿಜಿಟಲ್‌ ವ್ಯವಸ್ಥೆಯಡಿ ತರುತ್ತಿವೆ.

ಸಾಲ ನೀಡಿಕೆಯ ನಿಯಮಾವಳಿಗಳು ಹಾಗೂ ಇತರ ಮಾಹಿತಿಗಳನ್ನು ಕಂಪನಿಯ ಅಂತರ್ಜಾಲ ತಾಣಗಳ ಮೂಲಕ ಗ್ರಾಹಕರು ಪಡೆಯಬಹುದು. ಕಂಪನಿಗಳು ಗ್ರಾಹಕರ ಮೊಬೈಲ್‌ಗೆ ಎಸ್‌ಎಂಎಸ್‌ ಮೂಲಕ ಅಥವಾ ಇ–ಮೇಲ್‌ ಮೂಲಕವೂ ಈ ಮಾಹಿತಿಯನ್ನು ತಲುಪಿಸಬಹುದು. ಸಾಲಕ್ಕೆ ಅರ್ಜಿ ಸಲ್ಲಿಸಿದ ಗಳಿಗೆಯಿಂದ ಸಾಲದ ಹಣ ಕೈಸೇರುವವರೆಗೆ ‘ನಿಮ್ಮ ಅರ್ಜಿ ಯಾವ ಹಂತದಲ್ಲಿದೆ’ ಎಂಬ ಬಗ್ಗೆ ಕಂಪನಿಯು ಗ್ರಾಹಕರಿಗೆ ಮಾಹಿತಿ ನೀಡುತ್ತಲೇ ಇರುತ್ತದೆ.

ತಂತ್ರಜ್ಞಾನದ ಈ ಅಭಿವೃದ್ಧಿಯಿಂದಾಗಿ ಹಣಕಾಸು ಸಂಸ್ಥೆಗಳಿಗೆ ಗ್ರಾಮೀಣ ಭಾಗಗಳಲ್ಲಿ ಶಾಖೆಗಳನ್ನು ತೆರೆಯದಿದ್ದರೂ, ಸಮಾಜದ ಅತ್ಯಂತ ಕೆಳಮಟ್ಟದಲ್ಲಿರುವ ಜನರನ್ನೂ ತಲುಪಲು ಸಾಧ್ಯವಾಗುತ್ತಿದೆ. ಸಂಸ್ಥೆಯ ಪ್ರತಿನಿಧಿಗಳಿಗೆ ಟ್ಯಾಬ್‌, ಸ್ಕ್ಯಾನರ್‌ಗಳ ಬಳಕೆ ಮುಂತಾದ ತರಬೇತಿಗಳನ್ನು ನೀಡಿ ಗ್ರಾಮೀಣ ಜನರನ್ನು ತಲುಪುವಂತೆ ಮಾಡಲಾಗುತ್ತಿದೆ. ಇದರಿಂದಾಗಿ ಎಲ್ಲರ ಸಮಯದಲ್ಲೂ ಉಳಿತಾಯವಾಗುತ್ತಿದೆ. ಗ್ರಾಹಕರು ಹತ್ತಾರು ದಾಖಲೆಗಳನ್ನು ಹೊಂದಿಸಿ, ದಿನಗಟ್ಟಲೆ ಅಲೆದಾಡುವುದೂ ತಪ್ಪಿದಂತಾಗುತ್ತದೆ.

ಗ್ರಾಹಕರ ಖಾತೆಯಿಂದ ಸ್ವಯಂಚಾಲಿತವಾಗಿ ಸಾಲದ ಮಾಸಿಕ ಕಂತನ್ನು (ಇಎಂಐ) ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗೆ ವರ್ಗಾವಣೆ ಮಾಡುವ ‘ಇ–ನ್ಯಾಚ್‌’ ವ್ಯವಸ್ಥೆಯು ಸಾಲ ಮರುಪಾವತಿ ವಿಧಾನವನ್ನೂ ಸರಳಗೊಳಿಸಿದೆ.

ಗ್ರಾಹಕ ಕೇಂದ್ರಿತ ನೀತಿ

ತಂತ್ರಜ್ಞಾನದ ಕ್ರಾಂತಿಯಿಂದ ಆಗಿರುವ ಬಹುದೊಡ್ಡ ಲಾಭವೆಂದರೆ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾದ ಸಾಲ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿರುವುದು.

ತನಗೆ ಬೇಕಾದಂತೆ ಸಾಲ ಯೋಜನೆಯನ್ನು ರೂಪಿಸಿ, ಬೇಕಾದ ರೀತಿಯಲ್ಲಿ ಹಣವನ್ನು ಬಳಸಲು ಇನ್ನು ಮುಂದೆ ಗ್ರಾಹಕರಿಗೆ ಸಾಧ್ಯವಾಗಲಿದೆ. ಗ್ರಾಹಕನು ತನಗೆ ಬೇಕಾದಾಗ ಸಂಸ್ಥೆಯ ಜತೆಗೆ ವಹಿವಾಟು ನಡೆಸಬಹುದು. ತಾನು ನಡೆಸಿದ ಪ್ರತಿಯೊಂದು ವಹಿವಾಟಿಗೂ ಸರಿಯಾದ ದಾಖಲೆಯನ್ನೂ ಪಡೆಯಬಹುದಾಗಿದೆ.

ಪೇಪರ್‌ಲೆಸ್‌ ಸೌಲಭ್ಯ

ಸಾಲ ನೀಡಿಕೆಯ ಪ್ರಮುಖ ಪ್ರಕ್ರಿಯೆಗಳನ್ನು ಕಾಗದರಹಿತವಾಗಿಯೇ ನಡೆಸಬೇಕು ಎಂಬುದು ತಂತ್ರಜ್ಞಾನ ಬಳಕೆಯ ಉದ್ದೇಶವಾಗಿದೆ. ಇ– ಕೆವೈಸಿ (ಗ್ರಾಹಕರ ಮಾಹಿತಿ ಸಂಗ್ರಹ), ಆಧಾರ್‌ ಅಪ್‌ಲೋಡ್‌ ಮಾಡುವುದು, ವಿವಿಧ ತಪಾಸಣಾ ಸಂಸ್ಥೆಗಳ ಜೊತೆಗೆ ಪತ್ರ ವ್ಯವಹಾರ... ಎಲ್ಲವೂ ಆನ್‌ಲೈನ್‌ನಲ್ಲೇ ನಡೆಸುವುದು ಮುಂದಿನ ಗುರಿಯಾಗಿದೆ.

ಡಿಜಿಟಲೀಕರಣದಿಂದಾಗಿ ಅನೇಕ ತಂತ್ರಜ್ಞಾನಗಳು ಪರಸ್ಪರ ಬೆಸೆದುಕೊಂಡಿವೆ. ಗ್ರಾಹಕರು ಹೆಚ್ಚು ಸಮಯ ಹಾಗೂ ಹಣವನ್ನು ವೆಚ್ಚ ಮಾಡದೆಯೇ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ. ತಂತ್ರಜ್ಞಾನ ಇಂದು ಬರಿಯ ವಹಿವಾಟಿಗೆ ಸೀಮಿತವಾಗಿಲ್ಲ. ಅದರ ವ್ಯಾಪ್ತಿ ಅಗಾಧವಾಗಿ ವಿಸ್ತರಿಸಿದೆ. ಆದ್ದರಿಂದ ಇನ್ನು ಕೆಲವೇ ವರ್ಷಗಳಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದೆಂದರೆ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಿದಷ್ಟೇ ಸರಳವಾಗಿರಲಿದೆ.

ಆಧಾರ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry