4
ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಹೇಳಿಕೆ

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ

Published:
Updated:

ಶೃಂಗೇರಿ: ‘ಶೃಂಗೇರಿ ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ರೈತರು, ಜನಸಾಮಾನ್ಯರು, ಬಡವರ ಕಷ್ಟಕ್ಕೆ ಸ್ಪಂದಿಸುತ್ತೇನೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಶೃಂಗೇರಿ ಪಟ್ಟಣದ ಹೊರವಲ ಯದ ಉಳವಳ್ಳಿಯ ರೈತ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿ ಯಿಂದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರದಿಂದ ದೊರಕುವ ಸೌಲಭ್ಯವನ್ನು ಪಕ್ಷಾತೀತವಾಗಿ ಅರ್ಹ ರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ಗ್ರಾಮೀಣ ಪ್ರದೇ ಶದ ರಸ್ತೆಗಳು ದುಃಸಿತ್ಥಿಯಲ್ಲಿದ್ದು, ಅವುಗಳ ದುರಸ್ತಿಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಸಕ್ರಮ ಸಮಿತಿಯ ರಚನೆ ನಂತರ ಸಮಿತಿಯ ಸಭೆ ನಡೆಸಿ, ರೈತರಿಗೆ ಹಕ್ಕು ಪತ್ರ ನೀಡಲಾಗುವುದು. ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಲೇಜು ಹಾಗೂ ಶಾಲೆ ಅಭಿವೃದ್ಧಿಗೆ ಕ್ರಮ ತೆಗೆದು ಕೊಳ್ಳಲಾಗುವುದು. ಸಾರ್ವಜನಿಕ ಆಸ್ಪತ್ರೆಗೆ ವೈದ್ಯರನ್ನು ನೇಮಕಗೊಳಿಸಿ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರಕಿಸಲಾಗುತ್ತದೆ. ಶೀಘ್ರವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವಿದ್ಯುತ್, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯಿಂದ ಸಾರ್ವಜನಿಕರಿಗೆ ದೊರಕುವ ಸೌಲಭ್ಯದ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದ ಕಾರ್ಯಕರ್ತರನ್ನು ವಿವಿಧ ಸಮಿತಿ ಯ ಸದಸ್ಯರನ್ನಾಗಿಸಿ ಜವಾಬ್ದಾರಿ ನೀಡ ಲಾಗುತ್ತದೆ’ ಎಂದರು.

ಮುಖಂಡ ದಿನೇಶ್ ಕಡ್ತೂರು ಮಾತ ನಾಡಿ, ‘ಜನರು ನಿಮ್ಮ ಬಗ್ಗೆ ತುಂಬಾ ವಿಶ್ವಾಸ ಇರಿಸಿಕೊಂಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅತ್ಯಂತ ಯಶಸ್ವಿ ರಾಜಕಾರಣಿಯಗಿ ಹೊರಹೊಮ್ಮಬೇಕು. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ’ ಎಂದರು.

ಕಿಸಾನ್ ಸೇಲ್ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿದರು. ಶಾಸಕ ಟಿ.ಡಿ.ರಾಜೇಗೌಡ ದಂಪತಿಯನ್ನು ಗೌರವಿಸಲಾಯಿತು. ಪಕ್ಷದ ಮುಖಂ ಡರಾದ ಕಡ್ತೂರು ದಿನೇಶ್, ಡಾ.ಅಂಶುಮಾಂತ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕೀಲಾ ಗುಂಡಪ್ಪ, ಸೌಮ್ಯ, ಅನಂತ ಪದ್ಮನಾಭ ಭಟ್, ಕೆ.ಎಂ.ರಮೇಶ್ ಭಟ್, ಕೆ.ಟಿ.ಮಂಜುನಾಥ್, ಉಮೇಶ್ ಪುದುವಾಳ್, ಶಿವಮೂರ್ತಿ, ಕೃಷ್ಣಪ್ಪ ಗೌಡ, ಗೋಪಾಲ ಹೆಗ್ಡೆ, ಚಂದ್ರಶೇಖರ್, ಚಂದ್ರಮತಿ, ಕೆ.ಎಲ್.ರೇಖಾ, ಕಲ್ಪನಾ, ನಾಗರಾಜ್ ಇದ್ದರು.

ನಿರಂತರ ಸಂಪರ್ಕ; ಯಶಸ್ಸಿಗೆ ಕಾರಣ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಾಜೇಗೌಡರು ಕ್ಷೇತ್ರದ ಜನತೆಯೊಂದಿಗೆ ಇಟ್ಟುಕೊಂಡಿದ್ದ ಸತತ ಸಂಪರ್ಕ ಮತ್ತು ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿದ್ದರಿಂದ ಮತದಾರರು ಅವರನ್ನು ಬೆಂಬಲಿಸಿದ್ದಾರೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಶಾಸಕರಿಗೆ ನಮ್ಮೆಲ್ಲರ ಬೆಂಬಲ ಅಗತ್ಯ’ ಎಂದರು.

ಜನ ಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಹೊಂದಿ, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ. ನನ್ನ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರ ಸೇವೆಯನ್ನು ಮರೆಯುವುದಿಲ್ಲ

- ಟಿ.ಡಿ.ರಾಜೇಗೌಡ, ಶಾಸಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry