ಬೆಂಗಳೂರು ವಿ.ವಿಗೆ ಕುಲಪತಿಯಾಗಿ ಕೆ.ಆರ್.ವೇಣುಗೋಪಾಲ್‌ ನೇಮಕ

4

ಬೆಂಗಳೂರು ವಿ.ವಿಗೆ ಕುಲಪತಿಯಾಗಿ ಕೆ.ಆರ್.ವೇಣುಗೋಪಾಲ್‌ ನೇಮಕ

Published:
Updated:
ಬೆಂಗಳೂರು ವಿ.ವಿಗೆ ಕುಲಪತಿಯಾಗಿ ಕೆ.ಆರ್.ವೇಣುಗೋಪಾಲ್‌ ನೇಮಕ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆ.ಆರ್.ವೇಣುಗೋಪಾಲ್‌ ಅವರನ್ನು ಕುಲಪತಿಯಾಗಿ ನೇಮಿಸುವ ಮೂಲಕ 14 ತಿಂಗಳ ಹಂಗಾಮಿ ಕುಲಪತಿಗಳ ಪರ್ವಕ್ಕೆ ಮುಕ್ತಾಯ ಸಿಕ್ಕಿದೆ.

2017 ಫೆಬ್ರುವರಿ 6ರಂದು ಬಿ.ತಿಮ್ಮೇಗೌಡ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಈಗ ಪೂರ್ಣಪ್ರಮಾಣದ ಕುಲಪತಿಗಳನ್ನು ರಾಜ್ಯಪಾಲರು ಮಂಗಳವಾರ ನೇಮಕ ಮಾಡಿದ್ದಾರೆ.

ಇದೇ ಮಾರ್ಚ್‌ನಲ್ಲಿ ಐದನೇ ಹಂಗಾಮಿ ಕುಲಪತಿಯಾಗಿ ಗಣಿತ ವಿಭಾಗದ ಡೀನ್‌ ಶಿವಕುಮಾರ್‌ ಅವರು ಅಧಿಕಾರ ಸ್ವೀಕರಿಸಿದ್ದರು. ಯಾವುದೇ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಲ್ಲಿ ಇರುವವರು ನಿವೃತ್ತರಾದಾಗ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಪ್ರಕಾರ ಪೂರ್ಣಾವಧಿ ಕುಲಪತಿ ನೇಮಕವಾಗುವವರೆಗೆ ವಿಶ್ವವಿದ್ಯಾಲಯದ ಹಿರಿಯ ಡೀನ್‌ ಹಂಗಾಮಿ ಕುಲಪತಿಯಾಗಿ ನೇಮಕವಾಗುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry