ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ವೇಣುಗೋಪಾಲ್‌ ನೇಮಕ

7
ಕಾನೂನು ವಿವಿಗೆ ಈಶ್ವರ ಭಟ್‌

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ವೇಣುಗೋಪಾಲ್‌ ನೇಮಕ

Published:
Updated:
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಯಾಗಿ ಪ್ರೊ.ವೇಣುಗೋಪಾಲ್‌ ನೇಮಕ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಂಶುಪಾಲ ಪ್ರೊ.ವೇಣುಗೋಪಾಲ್‌ ನೇಮಕಗೊಂಡಿದ್ದಾರೆ.

ಗುಲ್ಬರ್ಗಾ ವಿ.ವಿ ಕುಲಪತಿ ಪ್ರೊ.ಎಸ್‌.ಆರ್.ನಿರಂಜನ ಅಧ್ಯಕ್ಷತೆಯ ಶೋಧನಾ ಸಮಿತಿಯು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಂಗಮೇಶ್ವರ ಪಾಟೀಲ್​, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ನಾಗಭೂಷಣ್ ಹಾಗೂ ಪ್ರೊ.ವೇಣುಗೋಪಾಲ್‌ ಅವರ ಹೆಸರನ್ನು ಸೂಚಿಸಿತ್ತು. ಈ ಪೈಕಿ ರಾಜ್ಯಪಾಲರು ವೇಣುಗೋಪಾಲ್‌ ಅವರ ಹೆಸರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಅಂತೆಯೇ, ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿ ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಈಶ್ವರ ಭಟ್‌ ನೇಮಕಗೊಂಡಿದ್ದಾರೆ. ಶೋಧನಾ ಸಮಿತಿಯು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಿ.ಬಸವರಾಜು, ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಜಶೇಖರ ಹಾಗೂ ಈಶ್ವರ ಭಟ್‌ ಅವರ ಹೆಸರನ್ನು ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry