ಮುರಳಿ ಕುಮಾರ್‌ಗೆ ಚಿನ್ನ

7
ಗೌಡೆನ್‌ ಸ್ಪೈಕ್‌ ಅಥ್ಲೆಟಿಕ್ಸ್‌ ಕ್ರೀಡಾಕೂಟ

ಮುರಳಿ ಕುಮಾರ್‌ಗೆ ಚಿನ್ನ

Published:
Updated:
ಮುರಳಿ ಕುಮಾರ್‌ಗೆ ಚಿನ್ನ

ನವದೆಹಲಿ: ಭಾರತದ ದೂರ ಅಂತರದ ಓಟಗಾರ ಗವಿತ್‌ ಮುರಳಿ ಕುಮಾರ್‌, ನೆದರ್‌ಲ್ಯಾಂಡ್ಸ್‌ನ ಲೀಡೆನ್‌ನಲ್ಲಿ ನಡೆದ ಗೌಡೆನ್‌ ಸ್ಪೈಕ್‌ ಅಥ್ಲೆಟಿಕ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಮಂಗಳವಾರ ನಡೆದ ಪುರುಷರ 10,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ 21ರ ಹರೆಯದ ಮುರಳಿ, 28 ನಿಮಿಷ 43.34 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.

ಇದು ಮುರಳಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಪಟಿಯಾಲದಲ್ಲಿ ನಡೆದಿದ್ದ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ನಲ್ಲಿ ಮುರಳಿ 29 ನಿಮಿಷ 33.85 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry