ಬದಲಾವಣೆಗೆ ಮಗಳು ಕಾರಣ: ಮಹೇಂದ್ರ ಸಿಂಗ್‌ ದೋನಿ

7

ಬದಲಾವಣೆಗೆ ಮಗಳು ಕಾರಣ: ಮಹೇಂದ್ರ ಸಿಂಗ್‌ ದೋನಿ

Published:
Updated:
ಬದಲಾವಣೆಗೆ ಮಗಳು ಕಾರಣ: ಮಹೇಂದ್ರ ಸಿಂಗ್‌ ದೋನಿ

ಮುಂಬೈ: ‘ಮಗಳು ಜೀವಾ ನನ್ನ ವ್ಯಕ್ತಿತ್ವದಲ್ಲಿ ಹಲವು ಬದಲಾವಣೆ ತಂದಿದ್ದಾಳೆ’ ಎಂದು ಭಾರತ ಕ್ರಿಕೆಟ್‌ ತಂಡದ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ ಹೇಳಿದ್ದಾರೆ.

‘ತಂದೆಯಾದ ನಂತರ ಆಟಗಾರನಾಗಿ ನನ್ನಲ್ಲಿ ಬದಲಾವಣೆ ಆಗಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ವ್ಯಕ್ತಿಯಾಗಿ ನನ್ನಲ್ಲಿ ಹಲವು ಬದಲಾವಣೆಗಳಾಗಿವೆ. ಹೆಣ್ಣು ಮಕ್ಕಳು ತಂದೆಯ ಮೇಲೆ ಪ್ರಭಾವ ಬೀರುತ್ತಾರೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ಕುಟುಂಬದಲ್ಲಿ ಅಗಾಧ ಸಂತಸ ತಂದ ಜೀವಾ ಹುಟ್ಟಿದ ಸಮಯದಲ್ಲಿ ನಾನು ಕ್ರಿಕೆಟ್‌ ಆಟದಲ್ಲಿ ಮುಳುಗಿದ್ದೆ. ಹೆಚ್ಚಿನ ಸಮಯ ಆಕೆಯೊಂದಿಗೆ ಕಳೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಬೇಸರವಿದೆ’ ಎಂದು ಅವರು ತಿಳಿಸಿದ್ದಾರೆ.

‘ಈ ಬಾರಿಯ ಐಪಿಎಲ್‌ ಆವೃತ್ತಿಯ ಎಲ್ಲ ಪಂದ್ಯಗಳಲ್ಲಿ ಜೀವಾ ಹಾಗೂ ನನ್ನ ಪತ್ನಿ ಭಾಗಿಯಾಗಿದ್ದರು. ಹಲವು ಪಂದ್ಯಗಳ ನಂತರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಜೀವಾ ನನ್ನೊಂದಿಗೆ ಕಾಲಕಳೆದಿದ್ದಾಳೆ. ನಾನು ಅಂಗಳದಲ್ಲಿ ಆಡುವುದನ್ನು ನೋಡಲು ಆಕೆ ಇಷ್ಟ ಪಡುತ್ತಾಳೆ’ ಎಂದೂ ತಿಳಿಸಿದ್ದಾರೆ.

‘ಮನೆಯಲ್ಲಿದ್ದಾಗ ಮಕ್ಕಳು ಆಡುವುದನ್ನು ನೋಡುವುದೇ ಖುಷಿಯ ವಿಚಾರ. ಆಕೆಯೊಂದಿಗೆ ಸಮಯ ಕಳೆಯುವ ಮೂಲಕ ಅನೇಕ ಒತ್ತಡಗಳಿಂದ ದೂರವಾಗುತ್ತೇನೆ’ ಎಂದು ಕೂಡ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry