ಬಾಕ್ಸಿಂಗ್‌: ಸವೀತಿ ಬೂರಾಗೆ ಚಿನ್ನ

7
ಉಮಖಾನೊವ್‌ ಸ್ಮಾರಕ ಬಾಕ್ಸಿಂಗ್ ಟೂರ್ನಿ

ಬಾಕ್ಸಿಂಗ್‌: ಸವೀತಿ ಬೂರಾಗೆ ಚಿನ್ನ

Published:
Updated:
ಬಾಕ್ಸಿಂಗ್‌: ಸವೀತಿ ಬೂರಾಗೆ ಚಿನ್ನ

ನವದೆಹಲಿ: ಭಾರತದ ಸವೀತಿ ಬೂರಾ ಅವರು ರಷ್ಯಾದ ಕಾಸ್‌ಪಿಯೆಸ್ಕ್‌ನಲ್ಲಿ ನಡೆಯುತ್ತಿರುವ ಉಮಖಾನೊವ್‌ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ 75 ಕೆ.ಜಿ. ಮಿಡ್ಲ್‌ವೇಟ್‌ ವಿಭಾಗದ ಫೈನಲ್‌ನಲ್ಲಿ ಸವೀತಿ, ಅನಾ ಅನಫಿನೊಜೆನೊವಾ ಅವರನ್ನು ಸೋಲಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿದ್ದ ಸವೀತಿ, ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ಹೈರಾಣಾಗಿಸಿ ಏಕಪಕ್ಷೀಯವಾಗಿ ಜಯಿಸಿದರು.

ಪುರುಷರ 81 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಬ್ರಿಜೇಶ್‌ ಯಾದವ್‌ ಬೆಳ್ಳಿಯ ಪದಕ ಗೆದ್ದರು. ಫೈನಲ್‌ನಲ್ಲಿ ಬ್ರಿಜೇಶ್‌, ರಷ್ಯಾದ ಮುರಾದ್‌ ರಬಾಡನೊವ್‌ ವಿರುದ್ಧ ಸೋತರು.

91 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ವೀರೇಂದರ್‌ ಕುಮಾರ್‌ ಅವರೂ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ವೀರೇಂದರ್‌, ಸ್ವೀಡನ್‌ನ ಅಲೆಕ್ಸಾಂಡರ್‌ ಮವಲ್‌ಬ್ಯಾಲ್‌ ವಿರುದ್ಧ ಪರಾಭವಗೊಂಡರು.

ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ್ದ ಶಶಿ ಚೋಪ್ರಾ (57 ಕೆ.ಜಿ), ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದ ಪಿಂಕಿ ಜಾಂಗ್ರಾ (51 ಕೆ.ಜಿ) ಮತ್ತು ಪವಿತ್ರಾ (60 ಕೆ.ಜಿ) ಅವರು ಕಂಚಿನ ಪದಕಗಳಿಗೆ ತೃಪ್ತಿ ಪಟ್ಟರು. ಇವರು ಸೆಮಿಫೈನಲ್‌ ಪಂದ್ಯಗಳಲ್ಲಿ ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry