ವಹಿವಾಟು 4 ತಿಂಗಳ ಗರಿಷ್ಠ

7

ವಹಿವಾಟು 4 ತಿಂಗಳ ಗರಿಷ್ಠ

Published:
Updated:
ವಹಿವಾಟು 4 ತಿಂಗಳ ಗರಿಷ್ಠ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಮಂಗಳವಾರದ ವಹಿವಾಟಿನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ದಿನದ ವಹಿವಾಟಿನಲ್ಲಿ 209 ಅಂಶ ಜಿಗಿತ ಕಂಡು 35,692 ಅಂಶಗಳಿಗೆ ತಲುಪಿತು. ಈ ಮೊದಲು ಸೂಚ್ಯಂಕ ಫೆಬ್ರುವರಿ 1 ರಂದು 35,906 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 56 ಅಂಶ ಹೆಚ್ಚಾಗಿ 10,842 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ಅಮೆರಿಕ ಮತ್ತು ಉತ್ತರ ಕೊರಿಯಾ ಮಧ್ಯೆ ನಡೆದ ಐತಿಹಾಸಿಕ ಶೃಂಗಸಭೆಯು ಜಾಗತಿಕ ಬಿಕ್ಕಟ್ಟನ್ನು ತಗ್ಗಿಸುವ ನಿರೀಕ್ಷೆ ಹುಟ್ಟಿಸಿದೆ. ಇದರಿಂದ ಹೂಡಿಕೆ ಚಟುವಟಿಕೆ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕೈಗಾರಿಕಾ ಪ್ರಗತಿಯ ಏರಿಕೆಯೂ ಸೂಚ್ಯಂಕದ ಏರಿಕೆಗೆ ನೆರವಾಯಿತು.

ದಿನದ ವಹಿವಾಟಿನಲ್ಲಿ  ಆರೋಗ್ಯ ವಲಯದ ಕಂಪನಿಗಳು ಶೇ 1.94 ರಷ್ಟು ಗರಿಷ್ಠ ಗಳಿಕೆ ಕಂಡವು.

ಭಾರಿ ಯಂತ್ರೋಪಕರಣ, ಎಫ್‌ಎಂಸಿಜಿ, ಬ್ಯಾಂಕಿಂಗ್‌, ಮೂಲಸೌಕರ್ಯ, ಗ್ರಾಹಕ ಬಳಕೆ ವಸ್ತುಗಳ ವಲಯಗಳೂ ಉತ್ತಮ ಏರಿಕೆ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry