‘ಕೆಎಚ್‌ಬಿ ಫ್ಲ್ಯಾಟ್‌ ಖರೀದಿಗೆ ಮುಕ್ತ ಅವಕಾಶ’

7
ನಿರ್ಬಂಧ ಸಡಿಲಿಸಿದ ಗೃಹ ಮಂಡಳಿ* ಠೇವಣಿ ಮೊತ್ತದಲ್ಲಿ ಭಾರೀ ಇಳಿಕೆ

‘ಕೆಎಚ್‌ಬಿ ಫ್ಲ್ಯಾಟ್‌ ಖರೀದಿಗೆ ಮುಕ್ತ ಅವಕಾಶ’

Published:
Updated:
‘ಕೆಎಚ್‌ಬಿ ಫ್ಲ್ಯಾಟ್‌ ಖರೀದಿಗೆ ಮುಕ್ತ ಅವಕಾಶ’

ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ ಖರೀದಿಗೆ ಇದ್ದ ಎಲ್ಲ ನಿರ್ಬಂಧಗಳನ್ನು ತೆಗೆಯಲಾಗಿದ್ದು, ಇನ್ನು ಮುಂದೆ ಯಾರು ಬೇಕಾದರೂ ಖರೀದಿಸಬಹುದಾಗಿದೆ ಎಂದು ವಸತಿ ಸಚಿವ ಯು.ಟಿ.ಖಾದರ್‌ ತಿಳಿಸಿದರು.

ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಈ ಹಿಂದೆ ಫ್ಲ್ಯಾಟ್‌ ಖರೀದಿಗೆ ₹ 5 ಲಕ್ಷ ಠೇವಣಿ ಇಡಬೇಕಿತ್ತು. ಈಗ ಆ ಮೊತ್ತವನ್ನು ₹50 ಸಾವಿರಕ್ಕೆ ಇಳಿಸಲಾಗಿದೆ ಎಂದರು.

ಕೆಎಚ್‌ಬಿ ನಿರ್ಮಿಸಿರುವ ಬಹು ಅಂತಸ್ತಿನ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ಗಳು ಖರೀದಿ ಆಗದೇ ಉಳಿದಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಠೇವಣಿ ಹಣ ಜಮೆ ಮಾಡಿದ ತಕ್ಷಣ ಸ್ಥಳದಲ್ಲೇ ಫ್ಲ್ಯಾಟ್‌ ಹಂಚಿಕೆ ಮಾಡಲಾಗುತ್ತದೆ. ಈ ಮೂಲಕ ಖಾಸಗಿ ಬಿಲ್ಡರ್‌ಗಳಿಗೂ ಪೈಪೋಟಿ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕೆಎಚ್‌ಬಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಎಷ್ಟು ಫ್ಲ್ಯಾಟ್‌ಗಳು ಖಾಲಿ ಉಳಿದಿವೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಹಿಂದೆ ಫ್ಲ್ಯಾಟ್‌ ಖರೀದಿಸಬೇಕಾದರೆ, ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು. ಬೇರೆ ನಿವೇಶನ ಅಥವಾ ಮನೆ ಹೊಂದಿರಬಾರದು ಎಂಬ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತಿತ್ತು ಎಂದರು.

ಇನ್ನು ಮುಂದೆ ಜಿ+14: ಇನ್ನು ಮುಂದೆ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ 14 ಅಂತಸ್ತಿನ (ಜಿ+14) ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.

ಈ ಹಿಂದೆ ಕೆಎಚ್‌ಬಿ ಬೆಂಗಳೂರಿನಲ್ಲಿ ಮಾತ್ರ ಹೆಚ್ಚಾಗಿ ಜಿ+ 4 ಅಂತಸ್ತಿನ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿತ್ತು. ಇನ್ನು ಮುಂದೆ ರಾಜ್ಯದ ಇತರ ನಗರಗಳಲ್ಲೂ ಜಿ+14 ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗು ವುದು ಎಂದರು.

* 12 ಲಕ್ಷ ಮನೆ ನಿರ್ಮಾಣದ ಗುರಿಯಲ್ಲಿ 8.50 ಲಕ್ಷ ಪೂರ್ಣ

* 3.50 ಲಕ್ಷ ಮನೆಗಳ ನಿರ್ಮಾಣ ಬಾಕಿ ಉಳಿದಿದೆ

* ರಾಜೀವ್‌ ವಸತಿ ಫಲಾನುಭವಿಗಳ ಖಾತೆಗೇ ಹಣ ನೇರ ವರ್ಗಾವಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry