ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣಿಸದಿರು ಕಂಡ್ಯ...

Last Updated 12 ಜೂನ್ 2018, 19:07 IST
ಅಕ್ಷರ ಗಾತ್ರ

‘ನನಗೆ ಅನ್ಯಾಯವಾಗಿದೆ; ಆದರೂ ವಾರ ಕಾಯುತ್ತೇನೆ’ ಎಂದು ಶಾಸಕ ಎಂ.ಬಿ. ಪಾಟೀಲರು ಅಳಲು ತೋಡಿಕೊಂಡಿದ್ದಾರೆ (ಪ್ರ.ವಾ., ಜೂನ್ 12). ಅವರ ಸಂಕಟ ಸಹಜವೇ.

ಆದರೆ ಆತುರ ಸಲ್ಲದು. ಇದಕ್ಕಿಂತ ಘೋರ ಅನ್ಯಾಯಕ್ಕೊಳಗಾದವರು ನಮ್ಮ ಕಾಲಮಾನದಲ್ಲೇ ಆಗಿ ಹೋದವರಿದ್ದಾರೆ. ಉಳುವವನಿಗೆ ಭೂಮಿ, ದಲಿತರ ಮೀಸಲಾತಿ, ಖಾಸಗಿ ಸಾಲ ಮನ್ನಾ ಇತ್ಯಾದಿ ಪ್ರಗತಿಪರ ಕಾನೂನುಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು 1980ರ ದಶಕದಲ್ಲಿ ಕಾಂಗ್ರೆಸ್‍ನಲ್ಲಿದ್ದ ಇಂದಿರಾ ಬ್ರಿಗೇಡ್‍ನ ಶಾಸಕರ ಗುಂಪು ಗುಂಡೂರಾವ್ ನಾಯಕತ್ವದಲ್ಲಿ ದಿನಬೆಳಗಾಗುವುದರೊಳಗೆ ಪದಚ್ಯುತಿಗೊಳಿಸಿದ್ದು ಇತಿಹಾಸ. ಅದೇ ಜನರು ಈಗ ಅರಸರನ್ನು ‘ನವ ಕರ್ನಾಟಕದ ನಿರ್ಮಾಪಕ’ ಎಂದು ಕೊಂಡಾಡುತ್ತಿದ್ದಾರೆ. ಕಾಲಚಕ್ರ ತಿರುಗುತ್ತದೆ.

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ಕಲ್ಪಿಸಲು ಹೋರಾಡಿದುದಕ್ಕಾಗಿ ಎಂ.ಬಿ. ಪಾಟೀಲರು ಮತ್ತು ಆ ಶಿಫಾರಸನ್ನು ಕೇಂದ್ರಕ್ಕೆ ಕಳುಹಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇವತ್ತು ‘ಬಲಿಪಶು’ ಮಾಡಲಾಗಿದೆ. ಇಂದಲ್ಲ ನಾಳೆ ಇಂಥವರನ್ನು ಜನ ಗುರುತಿಸುತ್ತಾರೆ. ಧರ್ಮದೊಳಕ್ಕೆ ಕೈ ಹಾಕಿದಾಗ ಅಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ತಲೆದಂಡ ಕೇಳುವುದು ಸಹಜವೇ. ಕಾಲಧರ್ಮವೇ ಹೀಗೆ. ಇದನ್ನೇ ಕನಕದಾಸರು ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT