6

ಅಸಹಾಯಕತೆ ತರವಲ್ಲ

Published:
Updated:

‘ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಹೋದರೆ ಕರ್ಚಿಗೆ ಕುತ್ತು ಬರಬಹುದು’ ಎಂಬ ಅಸಹಾಯಕತೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯೇ ಹೀಗೆ ಹೇಳಿದರೆ ಜನರ ಗತಿ ಏನು?

ಕುಮಾರಸ್ವಾಮಿ ಅವರು ಕುರ್ಚಿಗೆ ಕಟ್ಟು ಬಿಳದೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಧೈರ್ಯ ತೋರಿಸಬೇಕು. ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.

ಎಲ್ಲಾ ಇಲಾಖೆಗಳಿಗೆ ಡಿಜಿಟಲ್ ಸ್ಪರ್ಶ ನೀಡಿದರೆ ಕೆಳ ಹಂತದ ಬಹುಪಾಲು ಭ್ರಷ್ಟಾಚಾರ ನಿಯಂತ್ರಣವಾಗುತ್ತದೆ. ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ಚಿಂತಿಸಬೇಕೇ ವಿನಾ ಅಸಹಾಯಕತೆಯ ಮಾತನಾಡುವುದು ತರವಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry