ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ದೇಹದಾರ್ಢ್ಯ ಸ್ಪರ್ಧಿಗಳ ಅಮೋಘ ಸಾಧನೆ

Last Updated 23 ಜುಲೈ 2018, 10:20 IST
ಅಕ್ಷರ ಗಾತ್ರ

ಬೆಂಗಳೂರು: ಫಿಲಿಪ್ಪೀನ್ಸ್‌ನ ಸೆಬುವಿನಲ್ಲಿ ಜೂನ್‌ 1 ಹಾಗೂ 2ರಂದು ನಡೆದ ಎನ್‌ಎಸಿ ಮಿಸ್ಟರ್‌ ವರ್ಲ್ಡ್‌ ದೇಹದಾರ್ಢ್ಯ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ದೇಹದಾರ್ಢ್ಯ ಸ್ಪರ್ಧಿಗಳ ತಂಡ ಅಮೋಘ ಸಾಧನೆ ಮಾಡಿದೆ.

ವರ್ಕ್‌ಔಟ್‌ ವರ್ಲ್ಡ್‌ ಜಿಮ್‌ ಹಾಗೂ ಹೇಲ್ತ್‌ ಕ್ಲಬ್‌ ಸೆಬು ಜಂಟಿಯಾಗಿ ಆಯೋಜಿಸಿದ್ದ ಈ ಚಾಂಪಿಯನ್‌ಷಿಪ್‌ನಲ್ಲಿ 11 ರಾಷ್ಟ್ರಗಳ 270ಕ್ಕೂ ಹೆಚ್ಚು ದೇಹದಾರ್ಢ್ಯ ಪಟುಗಳು ಸ್ಪರ್ಧಿಸಿದ್ದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಅಮೆಚೂರ್ ದೇಹದಾರ್ಢ್ಯ ಸಂಸ್ಥೆಯನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ದೇಹದಾರ್ಢ್ಯ ಪಟುಗಳು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಡಿದ್ದಾರೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಹೆಚ್ಚು ಟ್ರೋಫಿಗಳನ್ನು ಗೆದ್ದ ರಾಷ್ಟ್ರಗಳ ಪಟ್ಟಿ ಯಲ್ಲಿ ಭಾರತ ಎರಡನೇ ಸ್ಥಾನ ಪಡೆದಿದೆ. ಅಗ್ರಸ್ಥಾನ ಜರ್ಮನಿಯ ಪಾಲಾಗಿದೆ.

ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರ ವಿವರ

ಪುರುಷರ ಬಾಡಿ ಕ್ಲಾಸ್‌ 1 ವಿಭಾಗ. ಮೂರನೇ ಸ್ಥಾನ: ಸೈಯದ್‌ ಸಿದ್ದಿಕ್‌.

ಪುರುಷರ ಬಾಡಿ ಕ್ಲಾಸ್‌ 2 ವಿಭಾಗ: ಮೊದಲನೇ ಸ್ಥಾನ: ಮನೋಜ್‌ ಕುಮಾರ್‌, ಎರಡನೇ ಸ್ಥಾನ: ಮಹೇಂದ್ರ ಕುಮಾರ್‌

ಪುರುಷರ ಬಾಡಿ ಕ್ಲಾಸ್‌ 3 ವಿಭಾಗ: ಎರಡನೇ ಸ್ಥಾನ: ರಾಜಾ ಮುರುಗನ್‌ , ಮೂರನೇ ಸ್ಥಾನ: ಸೈಯದ್‌ ಇಸ್ಮಾಯಿಲ್‌, ಆರನೇ ಸ್ಥಾನ: ಶಂಕರ್‌ ಗೌಡ.

ಮೆನ್‌ ಬಾಡಿ ಕ್ಲಾಸ್‌ 4: ಎರಡನೇ ಸ್ಥಾನ: ಗಿರೀಶ್‌ ಕಾಂತಪ್ಪ ಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT