ಒಪ್ಪಂದ: ಕಾಂಗ್ರೆಸ್‌ ಮೇಲ್ವಿಚಾರಣೆಗೆ ಆಗ್ರಹ

7

ಒಪ್ಪಂದ: ಕಾಂಗ್ರೆಸ್‌ ಮೇಲ್ವಿಚಾರಣೆಗೆ ಆಗ್ರಹ

Published:
Updated:
ಒಪ್ಪಂದ: ಕಾಂಗ್ರೆಸ್‌ ಮೇಲ್ವಿಚಾರಣೆಗೆ ಆಗ್ರಹ

ವಾಷಿಂಗ್ಟನ್‌: ಉತ್ತರ ಕೊರಿಯಾ ಜತೆಗಿನ ಯಾವುದೇ ಒಪ್ಪಂದ ಸಂಸತ್ತಿನ (ಕಾಂಗ್ರೆಸ್‌) ಮೇಲ್ವಿಚಾರಣೆಗೆ ಒಳಪಡಬೇಕು ಎಂದು ಅಮೆರಿಕದ ವಿರೋಧ ಪಕ್ಷ ಡೆಮಾಕ್ರಟಿಕ್‌ ಪಕ್ಷದ ಆರು ಹಿರಿಯ ಸಂಸದರು ಒತ್ತಾಯಿಸಿದ್ದಾರೆ.

ಇರಾನ್‌ ಜತೆಗಿನ ಅಣು ಒಪ್ಪಂದದ ಸಂದರ್ಭದಲ್ಲಿಯೂ ಸಂಸತ್ತಿನ ದೃಢವಾದ ಮೇಲುಸ್ತುವಾರಿ ವ್ಯವಸ್ಥೆ ಬೇಕು ಎಂದು ಕೇಳಲಾಗಿತ್ತು. ಅದಕ್ಕಿಂತ ಕಡಿಮೆ ಇಲ್ಲದ ರೀತಿಯ ನಿಗಾ ವ್ಯವಸ್ಥೆ ಉತ್ತರ ಕೊರಿಯಾಕ್ಕೆ ಸಂಬಂಧಿಸಿದಂತೆಯೂ ಇರಬೇಕು ಎಂದು ಸಂಸದರು ಆಗ್ರಹಿಸಿದ್ದಾರೆ. ಆದರೆ, ಇರಾನ್‌ ಜತೆಗಿನ ಒಪ್ಪಂದ ನಡೆದಾಗ ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಆಗಿನ ಅಧ್ಯಕ್ಷ ಬರಾಕ್‌ ಒಬಾಮ ಮುಂದುವರಿದಿದ್ದರು.

ಉತ್ತರ ಕೊರಿಯಾ ಪರ್ಯಾಯ ದ್ವೀಪವನ್ನು ಹೆಚ್ಚು ಸುರಕ್ಷಿತ ಮತ್ತು ಸುಸ್ಥಿರವಾಗಿಸಲು ಹಾಗೂ ಏಷ್ಯಾದಲ್ಲಿ ಅಮೆರಿಕದ ನಾಯಕತ್ವಕ್ಕಾಗಿ ಅಮೆರಿಕ–ಉತ್ತರ ಕೊರಿಯಾ ಶೃಂಗಸಭೆಯು ದೊಡ್ಡ ಅವಕಾಶವಾಗಿದೆ ಎಂದು ಡೆಮಾಕ್ರಟ್‌ ಪಕ್ಷದ ಸಂಸದರು ಹೇಳಿದ್ದಾರೆ.  

ಹಿರಿಯನಿಗೆ ಕಿರಿಯನ ಗೌರವ: ಶೃಂಗಸಭೆ ನಡೆಯುವ ಸ್ಥಳಕ್ಕೆ ಕಿಮ್‌ ಅವರು ಟ್ರಂಪ್‌ ಅವರಿಗಿಂತ ಏಳು ನಿಮಿಷ ಮೊದಲೇ ಬಂದಿದ್ದರು. ಕೊರಿಯಾ ಸಂಸ್ಕೃತಿ ಪ್ರಕಾರ, ಕಿರಿಯರು ಮೊದಲೇ ಹಾಜರಿರುವುದು ಹಿರಿಯರಿಗೆ ಗೌರವ ಸಲ್ಲಿಸುವುದರ ಸಂಕೇತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry