ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಚುರುಕು: ತುಂಬಿ ಹರಿಯುತ್ತಿರುವ ನದಿಗಳು

Last Updated 13 ಜೂನ್ 2018, 7:23 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಮುಂಗಾರು ಚುರುಕುಗೊಂಡಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳ ನೀರಿನ ಮಟ್ಟ ಹೆಚ್ಚಳ ಕಂಡಿದೆ. 

ಚಿಕ್ಕಮಗಳೂರು ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಸೇತುವೆ ಮೇಲೆ ನೀರು ಹರಿಯುತ್ತಿದೆ.  ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಹಂತೂರು ಭಾಗದಲ್ಲಿ ಜಮೀನುಗಳಿಗೆ ನೀರು ನುಗ್ಗಿದೆ.

ಹೇಮಾವತಿ ಜಲಾಶಯದ ಇಂದಿನ ಮಟ್ಟ

ಗರಿಷ್ಠ. ಮಟ್ಟ : 2922 (ಅಡಿ)
ಇಂದಿನ ಮಟ್ಟ: 2888.54 ಅಡಿ
ಒಳಹರಿವು: 37946 ಕ್ಯುಸೆಕ್
ಹೊರಹರಿವು: 200 ಕ್ಯುಸೆಕ್

ಇನ್ನು ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಾಗಿದೆ. ಮಂಗಳವಾರ 1,127 ಕ್ಯುಸೆಕ್ ಒಳಹರಿವು ಇತ್ತು. ರಾತ್ರಿಯಿಂದ 6,878 ಕ್ಯುಸೆಕ್ ಗೆ ಹೆಚ್ಚಳವಾಗಿದ್ದು, ಕಳೆದ ಹನ್ನೆರಡು ಗಂಟೆಗಳಲ್ಲಿ ಒಂದು ಟಿಎಂಸಿ ಅಡಿ ನೀರು‌ ಹರಿದು ಬಂದಿದೆ.

ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ: 1,633 ಅಡಿ
ಇಂದಿನ ಮಟ್ಟ: 1,582.55 (5.31 ಟಿ.ಎಂ.ಸಿ. ಅಡಿ)
ಒಳಹರಿವು: 6,878 ಕ್ಯುಸೆಕ್
ಹೊರಹರಿವು: 200 ಕ್ಯುಸೆಕ್

ಜಲಾಶಯದ ನೀರಿನ ಮಟ್ಟ

ಮಲಪ್ರಭಾ;

ಗರಿಷ್ಠ ಮಟ್ಟ: 2079.5 ಅಡಿ
ಇಂದಿನ ಮಟ್ಟ: 2039.20  ಅಡಿ
ಒಳಹರಿವು: 4166 ಕ್ಯುಸೆಕ್
ಹೊರಹರಿವು: 138 ಕ್ಯುಸೆಕ್

ಘಟಪ್ರಭಾ;
ಗರಿಷ್ಠ ಮಟ್ಟ: 2175.00 ಅಡಿ
ಇಂದಿನ ಮಟ್ಟ: 2088.35  ಅಡಿ
ಒಳಹರಿವು: 1056 ಕ್ಯುಸೆಕ್
ಹೊರಹರಿವು: 108 ಕ್ಯುಸೆಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT