ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್‌ನೆಸ್‌ ಸವಾಲೆಸೆದ ಮೋದಿ

7
ನರೇಂದ್ರ ಮೋದಿ ಸವಾಲಿಗೆ ಕುಮಾರಸ್ವಾಮಿ ಟಾಂಗ್‌

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್‌ನೆಸ್‌ ಸವಾಲೆಸೆದ ಮೋದಿ

Published:
Updated:
ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್‌ನೆಸ್‌ ಸವಾಲೆಸೆದ ಮೋದಿ

ದೆಹಲಿ: ಕೆಲ ದಿನಗಳಿಂದ ಟ್ವಿಟ್ಟರ್‌ನಲ್ಲಿ ಫಿಟ್‌ನೆಸ್‌ದೇ ಸುದ್ದಿಯಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಕಿದ್ದ ಫಿಟ್‌ನೆಸ್‌ ಚಾಲೆಂಜ್‌ ಸ್ವೀಕರಿಸಿದ್ದ ಮೋದಿ ಟ್ವಿಟ್ಟರ್‌ನಲ್ಲಿ ವಿಡಿಯೋ ಆಪ್ಲೋಡ್‌ ಮಾಡಿದ್ದು. ಪ್ರತಿ ಸವಾಲಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಫಿಟ್‌ನೆಸ್‌ ಚಾಲೆಂಜ್‌ ಹಾಕಿದ್ದಾರೆ.

 

ಟೆನ್ನಿಸ್‌ ಆಟಗಾರ ಮಾನಿಕ್‌ ಬಾತ್ರ ಮತ್ತು ಐಪಿಎಸ್‌ ಅಧಿಕಾರಿಗಳಿಗೂ ಸವಾಲೆಸೆದ ಮೋದಿ ವಿಶೇಷವಾಗಿ 40 ವರ್ಷ ಮೇಲ್ಪಟ್ಟವರಿಗೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ವಿಡಿಯೋ 2 ನಿಮಿಷದ್ದಾಗಿದೆ.

 

ವಿಡಿಯೋದಲ್ಲಿ ಯೋಗದ ಭಂಗಿಗಳನ್ನು ತೋರಿಸಿದ್ದಾರೆ. ನಡೆದಾಡಿದರೆ ದೇಹಕ್ಕೆ ಪಂಚಭೂತಗಳ ಸ್ಪರ್ಶವಾಗು‌ತ್ತದೆ. ದಿನ ಉಲ್ಲಾಸವಾಗಿರುತ್ತದೆ. ಉಸಿರಾಟಕ್ಕೂ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಸವಾಲಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 58ರ ಪ್ರಾಯದ ಮುಖ್ಯಮಂತ್ರಿಯ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಕ್ಕೆ ಧನ್ಯವಾದಗಳು. ಪ್ರತಿ ದಿವಸ ನಾನು ಟ್ರೆಡ್‌ಮಿಡ್‌ನಲ್ಲಿ ಯೋಗದ ಮೂಲಕವೇ ನನ್ನ ಪ್ರತಿ ದಿನವನ್ನು ಪ್ರಾರಂಭಿಸುವೆ ಎಂದು ತಿಳಿಸಿದ್ದಾರೆ. ನನ್ನ ಆರೋಗ್ಯದ ಬಗ್ಗೆ ತೋರಿದ ಕಾಳಜಿಯನ್ನು ನನ್ನ ರಾಜ್ಯದ ಅಭಿವೃದ್ಧಿ ತೋರಿ ರಂದು ಟಾಂಗ್‌ ನೀಡಿದ್ದಾರೆ.

 

ಜೊತೆಗೆ ಒಂದು ತಿಂಗಳ ಹಿಂದೆ ಫಿಟ್ನೆಸ್ ಸವಾಲು ಅಭಿಯಾನವನ್ನು ಆರಂಭಿಸಿದ ಕೇಂದ್ರದ ಯುವಜನ ಮತ್ತು ಕ್ರೀಡಾಭಿವೃದ್ಧಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರನ್ನು ಬೆಂಬಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry