ಮೂಲ ಸೌಕರ್ಯ ಕಲ್ಪಿಸಲು ಪ್ರಯತ್ನ

7
ಶಾಸಕ ಮಹಾಂತೇಶ ಕೌಜಲಗಿ ಅವರಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಮೂಲ ಸೌಕರ್ಯ ಕಲ್ಪಿಸಲು ಪ್ರಯತ್ನ

Published:
Updated:

ಬೈಲಹೊಂಗಲ: ‘ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆಯಿಂದ ಹೆಚ್ಚಿನ ಒತ್ತು ನೀಡಲಾಗಿದ್ದು, ನಾಗರಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಪುರಸಭೆಯ ಎಲ್ಲ ವಾರ್ಡ್‌ಗಳಲ್ಲಿ ನಗರೋತ್ಥಾನ 3ನೇ ಹಂತದ ಯೋಜನೆಯಲ್ಲಿ ಮಂಜೂರಾದ ₹ 6.35 ಕೋಟಿ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಪುರಸಭೆಯಿಂದ ಕಾಮಗಾರಿ ಕೈಗತ್ತಿಕೊಳ್ಳುವ ಪ್ರತಿಯೊಬ್ಬ ಗುತ್ತಿಗೆದಾ ರರು ಜನರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಾಳಜಿವಹಿಸಿ ಕೆಲಸ ಮಾಡಬೇಕು’ ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಪುರ

ಸಭೆ ಎಲ್ಲ ಸದಸ್ಯರು, ಸಿಬ್ಬಂದಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಮಾತನಾಡಿ, ‘ನಗರೋತ್ಥಾನ ಯೋಜನೆಯಲ್ಲಿ ರಸ್ತೆ, ಗಟಾರ, ಚರಂಡಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು’ ಎಂದರು.

ಪುರಸಭೆ ಅಧ್ಯಕ್ಷ ರಾಜಶೇಖರ ಮೂಗಿ, ಸದಸ್ಯರಾದ ಬಸವರಾಜ ಕಲಾದಗಿ, ವಿರುಪಾಕ್ಷ ವಾಲಿ, ನಿಸ್ಸಾರಅಹ್ಮದ್ ತಿಗಡಿ, ಎಂಜಿನಿಯರ ಎಸ್.ಬಿ. ಪಾಟೀಲ, ಗುತ್ತಿಗೆದಾರ ವಿಜಯ ಧಾಮನ್ನೆಕರ, ಹೌಸಿಂಗ್ ಕಾಲೊನಿ ನಿವಾಸಿಗಳಾದ ಬಿ.ಎಸ್. ಹರ್ಲಾಪೂರ, ಜಿ.ಬಿ. ಗುಗ್ಗರಿ, ಸಿ.ಎಸ್. ಧರೆಪ್ಪನವರ, ಮುರುಗೆಪ್ಪ ಬೆಂಡಿಗೇರಿ, ಎಸ್.ಬಿ. ಹರ್ಲಾಪೂರ, ಎಸ್.ಬಿ. ವಸ್ತ್ರದ, ಎಸ್.ಬಿ. ಪತ್ತಾರ, ಬಿ.ಎಸ್. ತಲ್ಲೂರ, ಡಾ.ರಾಜಶೇಖರ ಕುಡಚಿಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry